ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಕ್ಕೆ ಇಲ್ಲಿ ಬೆಲೆ ಇಲ್ಲ

Last Updated 3 ನವೆಂಬರ್ 2022, 19:45 IST
ಅಕ್ಷರ ಗಾತ್ರ

ಗುಜರಾತಿನ ಮೊರ್ಬಿ ತೂಗುಸೇತುವೆ ನವೀಕರಣ ಗುತ್ತಿಗೆಯನ್ನು ಅನರ್ಹರಿಗೆ ನೀಡಲಾಗಿತ್ತು ಎಂದು ನ್ಯಾಯಾಲಯಕ್ಕೆ ಪೊಲೀಸರು ವರದಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ (ಪ್ರ.ವಾ., ನ. 3). ಈ ದೇಶದಲ್ಲಿ ‘ಅರ್ಹತೆ’ಯ ಮಾನದಂಡಗಳು ಬೇರೆಯೇ ಇರುವಾಗ ಅನರ್ಹರು ಎಂಬ ಮಾತಿಗೆ ಅರ್ಥ ಉಳಿದಿದೆಯೇ?

ಈ ದೇಶದಲ್ಲಿ ಜೀವಕ್ಕೆ ಬೆಲೆ ಎಂಬುದು ಇಲ್ಲವಾಗಿದೆ. ದುರಂತ ಸಂಭವಿಸುತ್ತದೆ, ಸಾವು–ನೋವು ಆಗುತ್ತದೆ. ಆರೋಪ– ಪ್ರತ್ಯಾರೋಪಗಳು ನಡೆಯುತ್ತವೆ. ತನಿಖೆ, ಅಧಿಕಾರಿಗಳ ಅಮಾನತು ಎಂದೆಲ್ಲ ಕಾಲಹರಣ ಆಗುತ್ತದೆ. ಆ ಬಳಿಕ ಎಲ್ಲವನ್ನೂ ಮರೆತುಬಿಡುತ್ತೇವೆ. ಗುಣಮಟ್ಟ, ಉತ್ತರದಾಯಿತ್ವ ಎಂಬ ಪದಗಳು ಅಧಿಕಾರಸ್ಥರಿಗೆ ಅಪಥ್ಯ.

- ಗಿರೀಶ್‌ ಎನ್‌.ಕೆ., ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT