ಭಾನುವಾರ, ಆಗಸ್ಟ್ 14, 2022
21 °C

ಅನಗತ್ಯ ನಿಗಮಗಳು ರದ್ದಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಾಜ್ಯದಲ್ಲಿ 149 ನಿಗಮಗಳಿವೆ, ರಸ್ತೆ ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಬೇಡಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ (ಪ್ರ.ವಾ., ಡಿ. 14). ಆದರೆ, ರಾಜ್ಯಕ್ಕೆ ಅಷ್ಟೊಂದು ನಿಗಮಗಳ ಅಗತ್ಯವಿದೆಯೇ ಎಂಬ ಪ್ರಶ್ನೆ ಸಹಜವಾಗಿ ನಮ್ಮಲ್ಲಿ ಮೂಡುತ್ತದೆ. ನಿಗಮಗಳ ಅಧ್ಯಕ್ಷರ ಸವಲತ್ತುಗಳು ಸಚಿವರಿಗಿಂತ ಕಡಿಮೆಯೇನೂ ಇರುವುದಿಲ್ಲ. ವಾಸ್ತವದಲ್ಲಿ ಇಷ್ಟೊಂದು ನಿಗಮಗಳು ಸರ್ಕಾರಕ್ಕೆ ಆರ್ಥಿಕವಾಗಿ ಹೊರೆಯಾಗಿವೆ.

ಆಳುವ ಪಕ್ಷಗಳ ಅತೃಪ್ತರ ತಾಣಗಳಂತಾಗಿರುವ ನಿಗಮಗಳ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳ ಜೊತೆಗೆ ಅನವಶ್ಯಕವಾಗಿ ಸೃಷ್ಟಿಸಿರುವ ನಿಗಮಗಳನ್ನು ರದ್ದು ಮಾಡಬೇಕು. ಉಳಿದ ನಿಗಮಗಳ ಹೊಣೆಯನ್ನು ಸರ್ಕಾರಿ ಅಧಿಕಾರಿಗಳಿಗೆ ವಹಿಸಿ, ಸರ್ಕಾರದ ಆದಾಯ ಸೋರಿಕೆಯನ್ನು ತಡೆಯಬೇಕು.

–ಪ್ರವೀಣ ನಾಗಪ್ಪ ಯಲವಿಗಿ, ಹಾವೇರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು