ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈ ಲಾರ್ಡ್ ನನ್ನ‌ ವಾದ...

Last Updated 19 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಚಲನಚಿತ್ರವೊಂದರಲ್ಲಿ ‘ಮೈ ಲಾರ್ಡ್, ನನ್ನ ವಾದ ಕೇಳಿ, ಕೇಳಿ, ಕೇಳಿ...’ ಎಂದು ಡಾ. ರಾಜ್‌ಕುಮಾರ್‌ ಅವರು ಹಾಡುವುದನ್ನು ಕೇಳಿದ್ದೇವೆ. ಇದರ ಜೊತೆಗೆ ಸಿನಿಮಾಗಳ ನ್ಯಾಯಾಲಯ ಕಲಾಪದ ಸನ್ನಿವೇಶಗಳಲ್ಲಿ ನ್ಯಾಯಮೂರ್ತಿ ಗಳನ್ನು ವಕೀಲರು ‘ಮೈ ಲಾರ್ಡ್’ ಎಂದು ಸಂಬೋಧಿಸುವುದನ್ನು ಕೇಳುತ್ತಿರುತ್ತೇವೆ. ಆದರೀಗ ನಮ್ಮ ಹೈಕೋರ್ಟ್‌ ನ್ಯಾಯಮೂರ್ತಿ ಪಿ.ಕೃಷ್ಣಭಟ್‌ ಅವರು ‘ನಮ್ಮನ್ನು ಲಾರ್ಡ್ ಎಂದು ಕರೆಯಬೇಡಿ, ಸರ್ ಎಂದು ಕರೆಯಿರಿ’ ಎಂದು ವಕೀಲರಿಗೆ ಹೇಳಿದ್ದಾರೆ.

ಈ ಹಿಂದೆ ರಾಜಸ್ಥಾನ ಹಾಗೂ ಕೋಲ್ಕತ್ತ ಹೈಕೋರ್ಟ್‌ಗಳು, ನ್ಯಾಯಾಧೀಶರನ್ನು ಮೈ ಲಾರ್ಡ್ ಎಂದು ಸಂಬೋಧಿಸದಂತೆ ತಿಳಿಸಿ ದ್ದವು. ಅದರ ಮುಂದುವರಿದ ಭಾಗವಾಗಿ ಈಗ ನಮ್ಮ‌ ಹೈಕೋರ್ಟ್‌ ನ್ಯಾಯಮೂರ್ತಿಗಳೂ ಇದನ್ನೇ ಹೇಳಿದ್ದಾರೆ. ನ್ಯಾಯಾಲಯಗಳ ಈ ಅಭಿಪ್ರಾಯವನ್ನು ನೋಡಿದಾಗ, ನಾಗರಿಕ ಸಮಾಜದಲ್ಲಿ ದೇವರ ಸಮಾನ ಯಾರೂ ಇಲ್ಲ ಎಂಬುದು ಮನದಟ್ಟಾಗುತ್ತದೆ. ಇದನ್ನು ನೋಡಿಯಾದರೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ನಾಯಕರುಗಳನ್ನು ಇಂದ್ರ ಚಂದ್ರರಿಗೆ ಹೋಲಿಸುವುದನ್ನು ನಿಲ್ಲಿಸಲಿ.

- ಲಕ್ಷ್ಮೀಕಾಂತರಾಜು ಎಂ.ಜಿ.,ಮಠಗ್ರಾಮ, ಗುಬ್ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT