ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಳಿಯುತ್ತಿದ್ದಾರೆ ಪ್ರಯಾಣಿಕರು

ಅಕ್ಷರ ಗಾತ್ರ

ರಾಜ್ಯದಾದ್ಯಂತ ಸಾರಿಗೆ ನಿಗಮಗಳ ಬಸ್‍ಗಳು ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ನಾಗರಿಕರು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ನಿತ್ಯ ಇವುಗಳನ್ನು ಅವಲಂಬಿಸಿದ್ದ ಕಾರ್ಮಿಕರು, ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ನೌಕರರು, ಪರ ಊರಿಗೆ ತೆರಳಬೇಕಾದ ಇತರ ಪ್ರಯಾಣಿಕರು ಲಾಕ್‍ಡೌನ್‌ ಕಾಲದ ಪರಿಸ್ಥಿತಿ ಅನುಭವಿ ಸುವಂತಾಗಿದೆ. ಸಾರಿಗೆ ನಿಗಮಗಳ ಬಸ್‍ಗಳು ವಿಶ್ರಾಂತಿ ಪಡೆಯುತ್ತಿರುವುದರಿಂದ ಸರ್ಕಾರಕ್ಕೂ ನಷ್ಟ ತಪ್ಪಿದ್ದಲ್ಲ. ಜನರ ಓಡಾಟಕ್ಕೆ ಅವಶ್ಯವಾದ ಬಸ್‍ಗಳ ಕೊರತೆಯಿಂದ ಕೆಲವೆಡೆ ಖಾಸಗಿ ವಾಹನಗಳವರು ಮನ ಬಂದಂತೆ ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿದ್ದಾರೆ. ಇದರಿಂದ ಸರ್ಕಾರದ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗುವಂತಹ ಸಂದರ್ಭ ಸೃಷ್ಟಿಯಾಗಿದೆ.

ಕೊರೊನಾ ಹೊಡೆತ, ಅತಿವೃಷ್ಟಿ, ಅನಾವೃಷ್ಟಿ, ಲಾಕ್‍ಡೌನ್‌ನಂತಹ ಕಹಿ ವಿದ್ಯಮಾನಗಳಿಂದ ಜನ ಬಸವಳಿ ದಿದ್ದಾರೆ. ಇದನ್ನೆಲ್ಲ ಗಮನಿಸಿದರೆ, ಭವಿಷ್ಯದಲ್ಲಿ ಇನ್ನೂ ಏನೇನು ಸಂಕಷ್ಟ ಎದುರಾಗಬಹುದೋ ಎಂಬ ಚಿಂತೆ ನಾಗರಿಕರನ್ನು ಕಾಡುತ್ತಿದೆ. ಸಾರಿಗೆ ಸಮಸ್ಯೆಗೆ ಶೀಘ್ರ ಪರಿಹಾರ ದೊರಕಿಸುವುದು ಅಗತ್ಯ. ಇದಕ್ಕೆ ಸರ್ಕಾರ ವೇದಿಕೆ ಕಲ್ಪಿಸಲಿ. ನೌಕರರು ಸಹಕರಿಸಲಿ.

- ಮಹಾಂತೇಶ ರಾಜಗೋಳಿ, ಬೈಲಹೊಂಗಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT