ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ನಾಗರಿಕರಿಗೆ ಮತ್ತೆ ಸಿಗಲಿ ಆದ್ಯತೆ

Last Updated 1 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ದೊರೆತ ವರ್ಷದಿಂದಲೂ ಸಿನಿಮಾಸಕ್ತ ಹಿರಿಯ ನಾಗರಿಕರು ಗಣನೀಯ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರ ಆಸಕ್ತಿಯನ್ನು ಪರಿಗಣಿಸಿ ಟಿಕೆಟ್‌ ದರದಲ್ಲಿ ರಿಯಾಯಿತಿ ನೀಡಲಾಗುತ್ತಿತ್ತು. ಜತೆಯಲ್ಲೇ ಚಿತ್ರ ವೀಕ್ಷಣೆಯ ಸಾಲಿನಲ್ಲೂ ಆದ್ಯತೆ ನೀಡುತ್ತಾ ಬರಲಾಗಿತ್ತು. ಹಿರಿಯ ನಾಗರಿಕರಿಗೆ ಬಹಳ ಹೊತ್ತು ನಿಲ್ಲಲು ತ್ರಾಣವಿರದ ಕಾರಣ, ಸರದಿಯಲ್ಲಿ ಇಂತಹ ಆದ್ಯತೆ ನೀಡಲಾಗುತ್ತಿತ್ತು. ಆದರೆ ಈ ವರ್ಷ ಇವರಿಗೆ ಇಂತಹ ಸೌಲಭ್ಯಗಳು ಇಲ್ಲವಾಗಿವೆ. ‘ಅದರಿಂದ ತಾರತಮ್ಯವಾಗುತ್ತಿತ್ತು. ಆದಕಾರಣ ಈ ಬಾರಿ ಯುವಜನರ ಒತ್ತಾಯದ ಮೇರೆಗೆ ಈ ತಾರತಮ್ಯ ತೊಡೆದುಹಾಕಲಾಗಿದೆ’ ಎಂದು ವ್ಯವಸ್ಥಾಪಕರು ಸಬೂಬು ನೀಡಿದ್ದಾರೆ. ‘ಹಿರಿಯ ನಾಗರಿಕರನ್ನು ಚಿತ್ರೋತ್ಸವದಿಂದ ದೂರ ಇಡುವ ಹುನ್ನಾರವಿದು’ ಎಂದು ಒರಾಯನ್ ಮಾಲ್‌ನ ಚಿತ್ರೋತ್ಸವದ ಸರದಿಯಲ್ಲಿ ನಿಂತಿದ್ದ ಕೆಲವು ವಯೋವೃದ್ಧ ಸಿನಿಮಾಸಕ್ತರು ಗೊಣಗುತ್ತಿದ್ದುದನ್ನು ಕೇಳಿಸಿಕೊಂಡೆ. ಈಗಲಾದರೂ ವ್ಯವಸ್ಥಾಪಕರು ದಯವಿಟ್ಟು ತಮ್ಮ ತೀರ್ಮಾನವನ್ನು ಬದಲಿಸಿ, ಹಿರಿಯ ನಾಗರಿಕರಿಗೆ ಆದ್ಯತೆಯ ಮೇಲೆ ಅವಕಾಶ ಮಾಡಿಕೊಡಬೇಕು.

ಟಿ.ಸುರೇಂದ್ರ ರಾವ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT