ಶನಿವಾರ, ಜನವರಿ 28, 2023
20 °C

ಸಾಮಾನ್ಯರಿಗೇನಿದೆ ಶಸ್ತ್ರ ಬಳಕೆಯ ಅಗತ್ಯ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹಿಂದೂಗಳು ಶಸ್ತ್ರಗಳನ್ನು ಪೂಜಿಸಿದರೆ ಸಾಲದು, ಬಳಸುವುದನ್ನೂ ಕಲಿಯಬೇಕು’ ಎಂದು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಸಹಕಾರ್ಯ ದರ್ಶಿ ಹಾಗೂ ಅಯೋಧ್ಯೆಯ ರಾಮಮಂದಿರ ನವನಿರ್ಮಾಣದ
ಉಸ್ತುವಾರಿಯಲ್ಲಿ ಒಬ್ಬರಾದ ಗೋಪಾಲ್‌ ನಾಗರಕಟ್ಟೆ ಹೇಳಿದ್ದಾರೆ.

(ಪ್ರ.ವಾ., ಅ. 6). ನಮ್ಮದು ಪ್ರಜಾಪ್ರಭುತ್ವದ ಆಡಳಿತ ಇರುವ ದೇಶ. ನಮಗೀಗ ಆಂತರಿಕವಾಗಿ ಯಾರ ಮೇಲೂ ಗುದ್ದಾಟ ನಡೆಸಬೇಕಾದ ಅಗತ್ಯ ಇಲ್ಲ. ಬೇರೆ ದೇಶಗಳೊಂದಿಗೆ ಯುದ್ಧದಂತಹ ಸಂದರ್ಭ
ಗಳನ್ನು ಎದುರಿಸಲು ಸೈನ್ಯ ಇದೆ. ಆಂತರಿಕ ಸಮಸ್ಯೆಗಳನ್ನು ನಿಭಾಯಿಸಲು ಪೊಲೀಸರಿದ್ದಾರೆ.

ಜನರು ತಮ್ಮ ನಿತ್ಯ ಬದುಕಿಗೆ ಸಹಕಾರಿ ಆಗುವ ಕಸುಬಿಗೆ ಸಂಬಂಧಿಸಿದ ಆಯುಧಗಳನ್ನು ಈ ಹಬ್ಬದಲ್ಲಿ ಪೂಜಿಸಿ ಖುಷಿಪಡುತ್ತಾರೆ. ಹೋರಾಟಕ್ಕೆ, ಹೊಡೆದಾಟಕ್ಕೆ ಬಳಸುವ ಅಸ್ತ್ರಗಳನ್ನೂ ಪೂಜಿಸಿ ಬಳಸಿ ಎಂದು ಸಂಘ ಸಂಸ್ಥೆಗಳ ಮುಖ್ಯಸ್ಥರು ಕರೆ ಕೊಡುವುದು ಸರಿಯಲ್ಲ. ಸಹಬಾಳ್ವೆಯ ಜೀವನ ಮಾಡಬೇಕಾದ ಸಮಾಜದಲ್ಲಿ ಇಂತಹ ಬೆಂಕಿ ಹಚ್ಚುವ ಮಾತನಾಡಿ, ಯುವಕರ ಕಣ್ಣು ಕೆಂಪಾಗಿಸುವುದು ಯಾವ ನ್ಯಾಯ? ಎಲ್ಲ ಧರ್ಮೀಯರೂ ಹೀಗೆಯೇ ಕರೆ ಕೊಟ್ಟು ಪ್ರಚೋದಿಸಿದರೆ, ಸಮಾಜದ ಪರಿಸ್ಥಿತಿ ಏನಾಗಬಹುದು?

→→ತಾ.ಸಿ.ತಿಮ್ಮಯ್ಯ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.