ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳು ಎಲ್ಲಿವೆ?

Last Updated 23 ಡಿಸೆಂಬರ್ 2018, 19:52 IST
ಅಕ್ಷರ ಗಾತ್ರ

‘ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಬದ್ಧತೆ ತೋರಿ’ ಎಂದಿದ್ದಾರೆ ಈ. ಬಸವರಾಜು (ವಾ.ವಾ., ಡಿ.18). ಸರಿ, ಆದರೆ ಬೆಂಗಳೂರು, ಮೈಸೂರು, ಧಾರವಾಡ, ಕಲಬುರ್ಗಿಯಂಥ ನಗರಗಳಿಂದ ಹಿಡಿದು, ಹಳ್ಳಿಗಳ ಮೂಲೆ ಮೂಲೆಯವರೆಗೂ ಖಾಸಗಿ ಶಾಲೆಗಳ ಹಳದಿ ಬಸ್‌ಗಳು ಓಡಾಡುತ್ತಿವೆ. ಇದರಿಂದಾಗಿ ಕನ್ನಡ ಮಾತೃಭಾಷಾ ಶಿಕ್ಷಣದ ಪರ ಹೋರಾಟಗಾರರು ಕೂಡ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಸೇರಿಸುವ ಅನಿವಾರ್ಯ ಉಂಟಾಗಿದೆ.

ಕರ್ನಾಟಕದ ಸಾವಿರಾರು ಹಳ್ಳಿಗಳಲ್ಲಿ ಸರ್ಕಾರಿ ಶಾಲೆಯೇ ಇಲ್ಲದಿರುವ ಸಂಗತಿಯನ್ನು ‘ಪ್ರಜಾವಾಣಿ’ಯು ವರದಿ ಮಾಡಿದೆ (ಡಿ.17). ಮೇಲಾಗಿ, ಸರ್ಕಾರವು ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಸಹ ಭರ್ತಿ ಮಾಡುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಬದ್ಧತೆಯ ಪ್ರಶ್ನೆ ಆಯೋಮಯವಾಗಿದೆ.

–ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT