ವಿದ್ಯಾರ್ಥಿಗಳ ಬಗ್ಗೆ ನಿರ್ಲಕ್ಷ್ಯವೇಕೆ?
ಗ್ರಾಮೀಣ ಪ್ರದೇಶದಿಂದ ವಿದ್ಯಾಭ್ಯಾಸಕ್ಕಾಗಿ ನಗರ ಪ್ರದೇಶಗಳಿಗೆ ಸಾವಿರಾರು ಮಕ್ಕಳು ಬರುತ್ತಾರೆ. ಆದರೆ, ಮೂಲೆಯ ಎಷ್ಟೋ ಹಳ್ಳಿಗಳಿಗೆ ಬಸ್ ಸೌಲಭ್ಯ ಇಲ್ಲದಿರುವುದು ಒಂದು ಸಮಸ್ಯೆ. ಇನ್ನು ಕೆಲವು ಮಕ್ಕಳದು ಇನ್ನೊಂದು ಬಗೆಯ ಸಮಸ್ಯೆ. ಅದೆಂದರೆ, ವಿದ್ಯಾರ್ಥಿಗಳಿಗೆ ಸರ್ಕಾರ ಬಸ್ಪಾಸ್ ಸೌಲಭ್ಯ ಕಲ್ಪಿಸಿದ್ದರೂ ಅವರನ್ನು ಬಸ್ಗಳಲ್ಲಿ ಕರೆದೊಯ್ಯಲು ನಿರ್ವಾಹಕ ಹಾಗೂ ಚಾಲಕರು ಎಲ್ಲಿಲ್ಲದ ನಿರ್ಲಕ್ಷ್ಯ ತೋರುತ್ತಾರೆ. ವಿದ್ಯಾರ್ಥಿಗಳ ಬಗ್ಗೆ ಇಂತಹ ನಿರ್ಲಕ್ಷ್ಯ ಏಕೆ? ಸಾರಿಗೆ ಸಚಿವರು ಇದನ್ನು ಗಮನಿಸಿ ಪರಿಹಾರ ಒದಗಿಸಬೇಕು. ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುವು ಮಾಡಿಕೊಟ್ಟು ಅವರ ವಿದ್ಯಾಭ್ಯಾಸಕ್ಕೆ ಸಹಕರಿಸುವ ಮನೋಭಾವವನ್ನು ಚಾಲಕ, ನಿರ್ವಾಹಕರಿಗೆ ಸಾರಿಗೆ ಸಂಸ್ಥೆ ಮನವರಿಕೆ ಮಾಡಿಕೊಡಬೇಕು.
– ಸುನೀಲ್ ಪಾಟೀಲ್, ನಾಗೇಶನಹಳ್ಳಿ, ಕೊಪ್ಪಳ
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.