ಗುರುವಾರ , ನವೆಂಬರ್ 14, 2019
19 °C

ಧರ್ಮದರ್ಶನ ಎಂದರೆ...

Published:
Updated:

ಹಾಸನ  ಜಿಲ್ಲಾಧಿಕಾರಿ ಆರ್.ಗಿರೀಶ್‌ ಅವರು ಹಾಸನಾಂಬಾ ದೇವಿಯ ದರ್ಶನಕ್ಕೆ ನಿಗದಿಪಡಿಸಿರುವ ಸಮಯದ ವಿವರ ನೀಡುತ್ತಾ ‘ಧರ್ಮದರ್ಶನ ಮತ್ತು ನೇರ ದರ್ಶನದ ವ್ಯವಸ್ಥೆ ಇದ್ದು, ಟಿಕೆಟ್ ದರವನ್ನು ಕ್ರಮವಾಗಿ ₹ 300 ಹಾಗೂ ₹ 1,000 ನಿಗದಿಪಡಿಸಲಾಗಿದೆ’ ಎಂದಿದ್ದಾರೆ (ಪ್ರ.ವಾ., ಸೆ. 19). ಧರ್ಮದರ್ಶನ ಎಂದರೆ ಉಚಿತ ದರ್ಶನ ಅಲ್ಲವೇ? ಕಡಿಮೆ ಬೆಲೆಯ ಟಿಕೆಟ್ ಕೊಂಡು ದರ್ಶಿಸಿದರೆ ಅದೂ ಧರ್ಮದರ್ಶನವೇ...! ದೇವರನ್ನು ದರ್ಶಿಸಿ ಕೃತಾರ್ಥವಾಗಲೂ ಹಣ ನೀಡಬೇಕಾಗಿ ಬಂದಿರುವುದು ಕಲಿಗಾಲದ ಮಹಿಮೆ.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

 

ಪ್ರತಿಕ್ರಿಯಿಸಿ (+)