ಹೊಸ ಪಂಥ ಯಾಕೆ ಬೇಕು?

ಸೋಮವಾರ, ಮೇ 20, 2019
32 °C

ಹೊಸ ಪಂಥ ಯಾಕೆ ಬೇಕು?

Published:
Updated:

‘ಬನ್ನಿ, ಸಂವಿಧಾನ ಪಂಥೀಯರಾಗೋಣ...’ ಎಂಬ ಅರುಣ್ ಜೋಳದಕೂಡ್ಲಿಗಿ ಅವರ ಕರೆ (ಸಂಗತ, ಫೆ.22) ಓದುವುದಕ್ಕೆ ಹಿತವಾಗಿದೆ. ಆದರೆ, ನಾವೆಲ್ಲಾ ಸಂವಿಧಾನದ ಆಶಯ, ನೆರಳಿನೊಳಗೇ ಬದುಕುತ್ತಾ ಇರುವವರು. ಮತ್ಯಾಕೆ ಈ ಪಂಥ, ಪಂಥೀಯತೆ? ಈಗಿರುವ ‘ಪಂಥ’ಗಳಿಂದಲೇ ರೇಜಿಗೆಯಾಗಿದ್ದು ಸಾಕು.

ಕುವೆಂಪು ಹೇಳಿದ್ದು ‘ಮನುಜಮತ ವಿಶ್ವಪಥ’ವೆಂದು. ಸಮಷ್ಟಿಪ್ರಜ್ಞೆಯ ಮೂಲಕವೇ ಲೋಕದ ದಾರಿಯನ್ನು ಮುಟ್ಟುವ ಸಾಮರಸ್ಯದ ನಡಿಗೆಯನ್ನೇ ಅವರು ಪ್ರತಿಪಾದಿಸಿದರು. ಕುವೆಂಪು ಅವರ ‘ಮತ’ದ ಪರಿಕಲ್ಪನೆಯಲ್ಲಿಯೇ ಪ್ರಜಾತಾಂತ್ರಿಕವಾದ, ಸಾಂವಿಧಾನಿಕ ಆಶಯಗಳೆಲ್ಲಾ ಜೀವಸೆಲೆ ಪಡೆದು ನಿಂತಿವೆ. ಪಂಥಗಳು ಮತ್ತೆ ಹೊರಳುದಾರಿಗಳನ್ನು ಸೃಷ್ಟಿಸುತ್ತವೆ. ಭಿನ್ನವಾದ ರಾಜಕಾರಣವೊಂದು ಹುಟ್ಟಿಕೊಂಡು ಇಲ್ಲಿಯೂ ಒಂದು ಸಾಂಸ್ಕೃತಿಕವಾದ ಯಾಜಮಾನ್ಯ  ವ್ಯವಸ್ಥೆ ರೂಪು ಪಡೆಯುತ್ತದಷ್ಟೇ.

ಸಂವಿಧಾನಬದ್ಧವಾಗಿ ಆಳುವುದಕ್ಕೆ, ಬದುಕುವುದಕ್ಕೆ, ನುಡಿದಂತೆ ನಡೆಯುವುದಕ್ಕೆ ಹೇಳಿಕೊಟ್ಟ, ಓದಿಸಿಟ್ಟ ಪಾಠಗಳನ್ನೇ ನಾವು ಸರಿಯಾಗಿ ಕಲಿತಿಲ್ಲ. ನಾವು ಮಾಡಬಹುದಾದ ಮಹತ್ಕಾರ್ಯವೆಂದರೆ, ನಾವೂ ನಮ್ಮ ಮಕ್ಕಳೆಲ್ಲಾ ಸಂವಿಧಾನವನ್ನು ನಿತ್ಯವೂ ಧ್ಯಾನಿಸುವಂತಿರಬೇಕು. ಅದು ನಮ್ಮೆಲ್ಲರ ಪ್ರಾರ್ಥನೆ ಮತ್ತು ವಿವೇಕವೂ ಆಗಬೇಕು. ಹಾಗೆಯೇ ನಮ್ಮೆಲ್ಲಾ ಮಾನವಿಕ ಪಠ್ಯಗಳಲ್ಲಿ ಸಂವಿಧಾನದ ಹೃದಯ ಸಂವಾದವಿರಬೇಕು.

- ಧಾರವಾಡ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !