ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಂಬಾಂಬ್ ಪಟಾಕಿ ನಿಷೇಧಿಸಿ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಇನ್ನು ಕೆಲವೇ ದಿನಗಳಲ್ಲಿ ದೀಪಾವಳಿ. ಈ ಹಬ್ಬಕ್ಕೆ ಪಟಾಕಿ, ಮತಾಪು, ಭೂಚಕ್ರ, ರಾಕೆಟ್, ಆಟಂಬಾಂಬ್ ಸುಡುವುದು ಸರ್ವೇಸಾಮಾನ್ಯ. ಆದರೆ ಇದರಿಂದ ಆಗುವ ಅನಾಹುತಗಳಿಗೆ ಲೆಕ್ಕವೇ ಇಲ್ಲ.  ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಸುಟ್ಟಗಾಯ, ಕಣ್ಣಿಗೆ ಹಾನಿ ಮಾಡಿಕೊಂಡು ಆಸ್ಪತ್ರೆಗಳಲ್ಲಿ ನರಳುವವರ ಸ್ಥಿತಿಯನ್ನು ಪತ್ರಿಕೆಗಳಲ್ಲಿ ನೋಡುತ್ತಿರುತ್ತೇವೆ.

ದೀಪಾವಳಿಯ ಮೂರು ನಾಲ್ಕು ದಿನಗಳು ಹಿರಿಯ ಜೀವಗಳಿಗೆ ಮತ್ತು ಅನಾರೋಗ್ಯದಿಂದ ಬಳಲುವವರಿಗೆ ಆಗುವ ತೊಂದರೆ ಅಷ್ಟಿಷ್ಟಲ್ಲ. ಆ ಸಮಯದಲ್ಲಿ ಎಲ್ಲೆಡೆ ಯುದ್ಧಭೂಮಿಯ ಗುಂಡಿನ ಮೊರೆತದಂತ ಶಬ್ದ. ಪಟಾಕಿ ಹೊಗೆ, ಓಡಾಡುವಾಗ ಹೊಗೆಯ ಅಡಚಣೆ. ಕಣ್ಣಿಗೆ ಅಥವಾ ಕೈಕಾಲುಗಳಿಗೆ ಬೆಂಕಿ ತಾಗಿ ಸುಟ್ಟ ಗಾಯಗಳಾಗುತ್ತವೆ.

ಪಟಾಕಿ ಹೊಗೆಯಿಂದ ಹೃದಯ ಸಂಬಂಧಿ ಕಾಯಿಲೆಯವರಿಗೆ, ಆಸ್ತಮಾ ಪೀಡಿತರಿಗೆ, ಉಸಿರಾಟದ ತೊಂದರೆ ಉಳ್ಳವರಿಗೆ ನರಕಯಾತನೆ. ಪ್ರತಿ ರಸ್ತೆಯಲ್ಲೂ ಪಟಾಕಿ ಸುಟ್ಟ ಕಾಗದದ ಚೂರುಗಳು ಚೆಲ್ಲಾಪಿಲ್ಲಿಯಾಗಿ ಎಲ್ಲೆಂದರಲ್ಲಿ ಕಸವಾಗಿ ಬಿದ್ದಿರುತ್ತದೆ.

ಆದ್ದರಿಂದ ಜನವಸತಿ ಪ್ರದೇಶದಲ್ಲಿ ಭಾರಿ ಶಬ್ದ ಉಂಟುಮಾಡುವ ಪಟಾಕಿಗಳನ್ನು, ಆಟಂಬಾಂಬ್ ನಿಷೇಧಿಸಬೇಕು. ಅದಕ್ಕಾಗಿ ದೊಡ್ಡ ದೊಡ್ಡ ಮೈದಾನಗಳಲ್ಲಿ ಬೇಕಾದರೆ ಅವಕಾಶ ಕೊಡಲಿ. ಸಾರ್ವಜನಿಕರರು ಕೂಡ ಬೆಳಕಿನ ಹಬ್ಬಕ್ಕೆ ಬೆಳಕು ತರುವಂಥ ಮತಾಪು, ಸುರುಸುರುಬತ್ತಿ, ಭೂಚಕ್ರ, ಇನ್ನಿತರೆ ಸಣ್ಣ ಪುಟ್ಟ ಪಟಾಕಿಗಳನ್ನು ಹಾರಿಸಲಿ.
ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕೆಂದು ವಿನಂತಿ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT