ಜನಾರ್ದನ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿ ಅವರಿಬ್ಬರು ವಿಚಾರಣಾಧೀನ ಕೈದಿಗಳ ಕೋಣೆಯಲ್ಲಿ ಸಾಮಾನ್ಯರಂತೆ ದಿನ ಕಳೆದಿದ್ದಾರೆ.

ಕೇವಲ ಬೆಳಗಿನ ಉಪಹಾರಕ್ಕಾಗಿ ಬಳ್ಳಾರಿಯಿಂದ ಬೆಂಗಳೂರಿಗೆ ಹೆಲಿಕಾಪ್ಟರ್‌ನಲ್ಲಿ ಹಾರಿ ಬರುತ್ತಿದ್ದರೆನ್ನಲಾದ ಗಣಿ ದೊರೆ ಮಂಗಳವಾರ ಬೆಳಿಗ್ಗೆ ಕಿಚಡಿಯಷ್ಟೇ (ಅನ್ನ, ಬೇಳೆ, ಕೆಲ ತರಕಾರಿಯ ಮಿಶ್ರಣ) ತಿಂದು ತಣಿಯಬೇಕಾಯಿತು.

ಮಧ್ಯಾಹ್ನದ ಊಟಕ್ಕೆ ಎಲ್ಲಾ ವಿಚಾರಣಾಧೀನ ಕೈದಿಗಳಿಗೆ ನೀಡುವ ಪ್ರಮಾಣದ ಊಟವನ್ನೇ ನೀಡಲಾಯಿತು. ಅಂದರೆ 600 ಗ್ರಾಂ ಅನ್ನ, 100 ಗ್ರಾಂ ಬೇಳೆ ಮತ್ತು 200 ಗ್ರಾಂ ತರಕಾರಿಯ ಪಲ್ಯ. ಇತರ ವಿಚಾರಣಾಧೀನ ಕೈದಿಗಳಂತೆ ಜನಾರ್ದನ ರೆಡ್ಡಿ ಊಟಕ್ಕಾಗಿ ಸರತಿಯಲ್ಲಿ ನಿಂತರು. ತಮ್ಮ ತಟ್ಟೆಯನ್ನು ತಾವೇ ತೊಳೆದರು.

ಅವರು ತಮ್ಮ ಉಡುಪನ್ನು ತಾವೇ ಸ್ವಚ್ಛಗೊಳಿಸಬೇಕು. ಅಲ್ಲದೇ ಕೋಣೆಯ ಸುತ್ತಲಿನ ಕಸವನ್ನು ತಾವೇ ಗುಡಿಸಿಕೊಳ್ಳಬೇಕು. (ಸುದ್ದಿ: ಪ್ರಜಾವಾಣಿ, ಸೆ. 7).

ಒಂದು ಕಾಲದಲಿ, ಕುದುರೆ ಮೇಲೆ
ಮೆರೆಸುವಿ/
ಒಂದು ಕಾಲದಲಿ, ಬರಗಾಲಲಿ ನಡೆಸುವಿ/
ಒಂದು ಕಾಲದಲಿ, ಉಪವಾಸದಲಿ
ಇರುಸುವೆ/
ನಿನ್ನಾಳು ನಾ. ನೀಬಲ್ಲೆ, ನಾನೇನು
ಬಲ್ಲೇನಯ್ಯ/
ನಿನ್ನ ಮಹಿಮೆ ನೀನೇ ಬಲ್ಲೆಯ್ಯೋ/
ಪನ್ನಗಶಯನ ಶ್ರೀ ಪುರಂದರ ವಿಠಲ//

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.