ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ವಿದ್ಯುತ್‌ ರಹಸ್ಯ ಬಯಲಾಗಲಿ

ಅಕ್ಷರ ಗಾತ್ರ

ರಾಜ್ಯದಲ್ಲಿ ಉತ್ಪಾದನೆ ಯಾಗುತ್ತಿರುವ ವಿದ್ಯು­ತ್ತಿ­­ನಲ್ಲಿ ಶೇಕಡ 39 ರಷ್ಟನ್ನು ರೈತರಿಗೆ ಕೊಡು­ತ್ತಿದ್ದು, ಉಚಿತ ವಿದ್ಯುತ್‌ ನೀಡುತ್ತಿ­ರು­ವು­ದನ್ನು ಮರು­ಪರಿಶೀಲನೆ ನಡೆಸ­ಲಾಗು­ವುದು ಎಂದು ಇಂಧನ ಸಚಿವ ಡಿ. ಕೆ. ಶಿವಕುಮಾರ್‌ ವಿಧಾನ ಪರಿ­ಷತ್ತಿ­ನಲ್ಲಿ ಹೇಳಿಕೆ ನೀಡಿದ್ದಾರೆ. (ಪ್ರ.ವಾ. ಜೂನ್‌ 25).

ಆದರೆ ಕೆಪಿಸಿಎಲ್‌ ಉತ್ಪಾದಿಸುವ ವಿದ್ಯು­ತ್ತಿನಲ್ಲಿ ಬೆಂಗ­ಳೂರು ವಿದ್ಯುತ್‌ ಸರಬ­ರಾಜು ಕಂಪೆನಿ (ಬೆಸ್ಕಾಂ)­ಯೊಂದೇ ಶೇಕಡ 50 ರ­ಷ್ಟನ್ನು ಖರೀ­ದಿ­ಸು­­ತ್ತಿದೆ. ಅಲ್ಲದೆ ನಿಗಮಕ್ಕೆ ₨ 3321 ಕೋಟಿ ಬಾಕಿ ಹಣ­ವನ್ನೂ ಪಾವತಿಸಿಲ್ಲ ಎಂಬುದು ಅಧಿಕಾರಿಗಳ ಹೇಳಿಕೆ (ಪ್ರ.ವಾ. ಜೂ. 14).ಹಾಗಾದರೆ ಬೆಂಗ­ಳೂರಿಗೆ, ರೈತರ ಪಂಪ್‌ಸೆಟ್‌ಗೆ ನೀಡುವ ವಿದ್ಯುತ್‌ ಸರಬರಾಜು ಹೊರತುಪಡಿಸಿ, ಉಳಿಕೆಯಾದ ಶೇಕಡ 11ರಷ್ಟು ವಿದ್ಯುತ್‌­ನಲ್ಲಿಯೇ ಇಡೀ ರಾಜ್ಯದ ವಿದ್ಯುತ್‌ ಬೇಡಿಕೆ­ಯನ್ನು  ಪೂರೈಸ­ಲಾಗು­ತ್ತಿದೆಯೆ? ಇದು ಸಾಧ್ಯವೆ? ಇದನ್ನು ನಂಬಬೇಕೆ?
ಗುಜರಾತ್‌, ಮಹಾರಾಷ್ಟ್ರ ಹಾಗೂ ತಮಿಳು­ನಾಡು­ಗಳಲ್ಲಿ ರೈತರಿಗೆ ಉಚಿತ ವಿದ್ಯುತ್‌ ನೀಡು­ತ್ತಿಲ್ಲ ಎಂದು ಹೇಳುವ ಮೊದಲು ಇಂಧನ ಸಚಿವರು   ಕೃಷಿ­ಭೂಮಿಗೆ ನೀರೊದಗಿಸಲು ಅಲ್ಲಿರುವ ಉತ್ತಮ ನೀರಾವರಿ ಯೋಜನೆಗಳನ್ನು ಗಮನಿಸ­ಬೇ­ಕಿತ್ತು.

ಬೆಳೆಗೆ ನ್ಯಾಯಯುತ, ವೈಜ್ಞಾನಿಕ ಬೆಲೆ ಹಾಗೂ ಭೂಮಿಗೆ ಮೂಲ­ಸೌಕರ್ಯ­­ಗ­ಳನ್ನು ಒದ­ಗಿಸಿದ್ದೇ ಆದರೆ ಉಚಿತ ವಿದ್ಯುತ್‌, ಸಹಾಯ­ಧನ­ಗಳನ್ನು  ರೈತರು ಏಕೆ ಕೇಳುತ್ತಾರೆ? ಕೆಲವೇ ರೈತರಿಗೆ ಉಚಿತ ವಿದ್ಯುತ್‌  ನೀಡಿ ಎಲ್ಲ ರೈತರಿಗೂ ಎಲ್ಲವನ್ನೂ ಉಚಿ­ತ­ವಾಗಿ ಕೊಟ್ಟಿದ್ದೇವೆ ಎಂಬಂತೆ ಪ್ರಚಾರ ಮಾಡುವುದು ಸರಿಯಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT