ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನ ಪರಿಶೀಲಿಸಿ ನಿರ್ವಹಣೆ ಕೈಗೊಳ್ಳಿ

Last Updated 18 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಜಯನಗರ ಪಾರ್ಕ್‌ನ ಈಸ್ಟ್ ಎಂಡ್ ನಿರ್ವಹಣೆಯಿಲ್ಲದೆ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಹಿರಿಯ ನಾಗರಿಕರೂ ಒಳಗೊಂಡಂತೆ ಉದ್ಯಾನದ ಬಳಕೆದಾರರು ಒಣಗಿದ ತರಗೆರೆ, ಕಸಕಡ್ಡಿ ಮತ್ತು ತ್ಯಾಜ್ಯದ ಮೇಲೆಯೇ ನಡೆದಾಡಬೇಕಾದ ಅನಿವಾರ್ಯತೆ. ಜೊತೆಗೆ ಕೆಟ್ಟ ವಾಸನೆಯಿಂದಾಗಿ ನೆಮ್ಮದಿಯಿಂದ ನಡೆದಾಡುವುದೂ ಸಾಧ್ಯವಾಗುತ್ತಿಲ್ಲ.

ಕೆಲಸಮಯದ ಹಿಂದೆ ಇಲ್ಲಿ ಅಳವಡಿಸಲಾದ ವಿದ್ಯುದ್ದೀಪಗಳನ್ನು ಹೊರತುಪಡಿಸಿದರೆ ಉಳಿದವುಗಳು ಉರಿಯುವುದೂ ಇಲ್ಲ. ಇತ್ತೀಚೆಗೆ ಈ ಉದ್ಯಾನವನ್ನು ಜಯನಗರದ ಕ್ಲೌಡ್‌ನೈನ್ ಆಸ್ಪತ್ರೆ ನಿರ್ವಹಿಸುತ್ತದೆ ಎಂಬ ನಾಮಫಲಕವನ್ನು ಹಾಕಲಾಯಿತು. ಅದರ ಬೆನ್ನಿಗೇ ಆಸ್ಪತ್ರೆಯ ಆಡಳಿತ ಮಂಡಳಿ ಇನ್ನಷ್ಟು ಪ್ರಖರವಾದ ದೀಪಗಳನ್ನು ಅಳವಡಿಸಿತು. ಇದು ಸಂತೋಷವೇ ಆದರೆ, ಆಸ್ಪತ್ರೆ ಹಾಗೂ ಮಹಾನಗರಪಾಲಿಕೆಯ ಅಧಿಕಾರಿಗಳಾಗಲಿ ಉದ್ಯಾನಕ್ಕೆ ಒಮ್ಮೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರೆ ಚೆನ್ನಾಗಿತ್ತು.

ನಿರ್ವಹಣೆಯ ಜವಾಬ್ದಾರಿ ಹೊತ್ತವರು ಮತ್ತು ವಹಿಸಿದವರಿಂದ ನಾವು ಇದನ್ನು ನಿರೀಕ್ಷಿಸಬಹುದೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT