ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಳ ದಿನವೇ?

Last Updated 12 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಒಡಿಶಾದ ಪಾದ್ರಿ ಗ್ರಹಾಂ ಸ್ಟೇನ್ಸ್ ಹಾಗೂ ಆತನ ಮಕ್ಕಳನ್ನು  ನಿರ್ದಯವಾಗಿ ಸುಟ್ಟ ಪಾತಕಿಯ ತಾಯಿ ‘ವೀರಮಾತೆ’ ಬಿರುದಿಗೆ ಪಾತ್ರಳಾಗುವುದಾದರೆ,  ಗೋಡ್ಸೆಗೆ ದೇವಸ್ಥಾನ ಕಟ್ಟುವುದಾದರೆ, ಅವನ ಜನ್ಮದಿನ ‘ಹುತಾತ್ಮ ದಿನ’ವಾಗುವುದು ಸಾಧ್ಯವಾಗುವುದಾದರೆ ಟಿಪ್ಪುವಿನ ಜಯಂತಿ ಕರಾಳದಿನ ಹೇಗಾಗುತ್ತದೆ?

ನಾವು ಬಾಲ್ಯದಲ್ಲಿ ನಮ್ಮಮ್ಮನಿಂದ ಶೌರ್ಯ ಪರಾ ಕ್ರಮಿಯೆಂದು ಟಿಪ್ಪುವನ್ನು ಹೊಗಳಿದ್ದ ಲಾವಣಿ, ಕತೆಗಳನ್ನು ಕೇಳಿ ಬೆಳೆದಿದ್ದೇವೆ. ಅವನು ಬ್ರಿಟಿಷರನ್ನು ಎದುರಿಸಿದ್ದು, ಅದಕ್ಕಾಗಿ ಮಕ್ಕಳನ್ನು ಸಹ ಒತ್ತೆ ಇಟ್ಟಿದ್ದು... ಇವುಗಳ ಕತೆ ಕೇಳುವಾಗ ನಮ್ಮ ಕೊರಳ ಸೆರೆ ಉಬ್ಬುತ್ತಿತ್ತು. ಅವನು ಪಟ್ಟದ ಆನೆಗೆ ಕಣ್ಣು ಬಂದಾಗ ನಂಜನಗೂಡಿಗೆ ಹರಕೆ ಹೊತ್ತದ್ದು, ‘ಹಕೀಂ ನಂಜುಂಡ’ ಎಂದು ನಂಜುಂಡೇಶ್ವರ ನನ್ನು ಶ್ಲಾಘಿಸಿ ಪೂಜಿಸಿದ್ದು, ಶೃಂಗೇರಿಯ ಭಕ್ತನಾಗಿ ದೇವಿಗೆ ನಡೆದುಕೊಂಡಿದ್ದು... ಇಂತಹ ಕತೆಗಳನ್ನೇ ಕೇಳಿ ಬೆಳೆದೆವು.

ಹಾಗೆಯೇ ಪುಟ್ಟ ಮಕ್ಕಳಿದ್ದಾಗ ನಮ್ಮಮ್ಮ ಬಾಬಾ ನಿಂದ ಸಕ್ಕರೆ ಮಂತ್ರಿಸಿ ನಮಗೆ ತಂದು ತಿನ್ನಿಸುತ್ತಿದ್ದರು. ನಿಜವಾಗಿಯೂ ಇತ್ತೀಚೆಗೆ ಧಾರ್ಮಿಕ ಅಸಹನೆ ತೀವ್ರವಾಗು ತ್ತಿದೆ. ನೆರೆಯ ರಾಷ್ಟ್ರ ನೇಪಾಳ ‘ಹಿಂದೂರಾಷ್ಟ್ರ’ವೆಂದು ಘೋಷಿಸಿಕೊಂಡು ಆಂತರಿಕ ಕ್ಷೋಭೆಗಳಿಂದ ತತ್ತರಿಸಿ ಈಗ ಬುದ್ಧಿ ಕಲಿತಿದೆ. ನಮಗೆ ಬುದ್ಧಿ ಬರುವುದು ಯಾವಾಗ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT