ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವ ನೈತಿಕ ಪ್ರಶ್ನೆ

Last Updated 27 ನವೆಂಬರ್ 2017, 19:30 IST
ಅಕ್ಷರ ಗಾತ್ರ

‘ಕಟಕಟೆ’ ಅಂಕಣ ಬರಹಗಳನ್ನು ಬಹಳ ಆಸಕ್ತಿಯಿಂದಲೇ ಓದುತ್ತೇವೆ. ಆದರೂ ವಕೀಲರ ಇಂಥಾ ವಗೈರೆಗಳೆಲ್ಲಾ ಓದುವಾಗ ಕೆಲವೊಂದು ‘ನೈತಿಕ’ ಪ್ರಶ್ನೆಗಳೂ ಕಾಡುತ್ತವೆ.

‘ಪಾರಾದ ಆರೋಪಿ, ಸಿಕ್ಕಿಬಿದ್ದ ಪೊಲೀಸ್’ ಇಂತಹ ಪ್ರಕರಣಗಳು ಏನನ್ನು ಸೂಚಿಸುತ್ತವೆ? ಅತ್ಯಂತ ದುಬಾರಿ ‘ಸೇವಾ’ ಶುಲ್ಕ ಪಡೆಯುವ ವಕೀಲರು ಶೇ 99ರಷ್ಟು ಪ್ರಕರಣಗಳನ್ನು ಗೆಲ್ಲುವುದು ತಾಂತ್ರಿಕ ಕಾರಣಗಳಿಂದ ಮಾತ್ರ ಅಲ್ಲವೇ?

ಪೊಲೀಸರು ಬೇಜವಾಬ್ದಾರಿಯಿಂದ ತನಿಖೆ ನಡೆಸುತ್ತಾರೆ. ಆರೋಪಿಗಳ ಪರವಾಗಿ ವರದಿ ತಯಾರು ಮಾಡುತ್ತಾರೆ ಎಂದು ವಕೀಲರು ಹೇಳಬಹುದಾದರೆ, ‘ಇವರೇ ಆರೋಪಿಗಳು’ ಎಂದು ಶತ ಪ್ರತಿಶತ ಗೊತ್ತಿದ್ದೂ ಅವರನ್ನು ‘ರಕ್ಷಿಸುವುದು’ ವಕೀಲರ ಆತ್ಮಸಾಕ್ಷಿಯನ್ನು ಚುಚ್ಚುವುದಿಲ್ಲವೇ? ಅತ್ಯಾಚಾರ, ಕೊಲೆ ಆರೋಪಿಗಳನ್ನು ಅವರು ಶುಲ್ಕ ಕೊಡದಿದ್ದರೂ ತಮ್ಮ ವೃತ್ತಿಧರ್ಮ ಎಂದುಕೊಂಡು ರಕ್ಷಿಸುವರೇ?

ಕಾಗೆ, ಕೋಗಿಲೆಯನ್ನು ಕಪ್ಪು ಎನ್ನುವುದೇಕೆ? ವಕೀಲರೂ ತಮ್ಮ ಜೇಬು ಭರ್ತಿ ಮಾಡಿಕೊಂಡೇ ಅಲ್ಲವೇ ಆರೋಪಿಗಳಿಗೆ ‘ನ್ಯಾಯ’ ಒದಗಿಸಿರುವ ‘ಖುಷಿ’ ಸುಖಿಸುವುದು!?

ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT