ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಉಲ್ಲಂಘನೆ

Last Updated 4 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

`ಸಂಕೇಶ್ವರ ಬಳಿ ನದಿಯಲ್ಲಿ 13 ಭ್ರೂಣ ಪತ್ತೆ' (ಪ್ರ. ವಾ. ಜ, 28) ಸುದ್ದಿ ಓದಿದೆ. ನಮ್ಮ ರಾಜ್ಯದಲ್ಲಿ ಆರು ವರ್ಷದ ಮಕ್ಕಳಲ್ಲಿ ಲಿಂಗ ಅನುಪಾತ 1991 ರಲ್ಲಿ 960, 2001 ರಲ್ಲಿ 946 ಮತ್ತು 2011 ರಲ್ಲಿ ಇನ್ನಷ್ಟು ಕುಸಿದು 943 ಆಗಿದೆ. ಹೀಗೆ ಹೆಣ್ಣು ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ.

ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ರೂಪಿಸಿದ ಪ್ರಸವ ಪೂರ್ವ ಪತ್ತೆ ತಂತ್ರಜ್ಞಾನ 1994 (ದುರ್ಬಳಕೆ ಮತ್ತು ತಡೆ) ಕಾಯ್ದೆ ಜಾರಿಯಾದರೂ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿಲ್ಲದಿರುವುದು ಸ್ಪಷ್ಟವಾಗಿದೆ. ಒಂದು ಮೂಲದ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಈ ಕಾನೂನು ಉಲ್ಲಂಘನೆ ಮಾಡಿದ ಪ್ರಕರಣಗಳು 2002 ರಿಂದ ಇಲ್ಲಿಯವರೆಗೆ ಕೇವಲ 44. ಇದರಲ್ಲಿ 23 ಪ್ರಕರಣಗಳು ಕಾನೂನು ಉಲ್ಲಂಘನೆ ಮಾಡಿ ಸಣ್ಣ ಪ್ರಮಾಣದ ದಂಡಕ್ಕೆ ಗುರಿಯಾಗಿವೆ.

ಇಡೀ ರಾಜ್ಯದಲ್ಲಿ 2000ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿದ್ದು ಅವುಗಳಲ್ಲಿ ಪ್ರತಿ ವರ್ಷ ಕೇವಲ 2 ಆಸ್ಪತ್ರೆಗಳು ಕಾನೂನು ಉಲ್ಲಂಘನೆ ಮಾಡಿದುದು ಬೆಳಕಿಗೆ ಬಂದಿವೆ.

ಮತ್ತೊಂದು ಅರ್ಥದಲ್ಲಿ ಹೇಳಬೇಕೆಂದರೆ ಪ್ರಸವ ಪೂರ್ವ ಪತ್ತೆ ತಂತ್ರಜ್ಞಾನ 1994 ಕಾನೂನು ಜಾರಿಗೊಳಿಸುವಲ್ಲಿ ಆರೋಗ್ಯ ಇಲಾಖೆ  ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT