ರೂಪಾಯಿಗೆ ಕೆ.ಜಿ. ಅಕ್ಕಿಯಂತೆ ಬಡವರಿಗೆ ತಿಂಗಳಿಗೆ 30 ಕೆ.ಜಿ. ಅಕ್ಕಿ ಕೊಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಈ ತಿಂಗಳ 4ರ ಸಂಚಿಕೆಯಲ್ಲಿ ಸವಿತಾ ನಾಗಭೂಷಣ ಸಮರ್ಥಿಸಿದ್ದಾರೆ. ನಾನು ಪದವೀಧರ ಆಗಿ ನೌಕರಿ ಬಿಟ್ಟು ಊರು ಸೇರಿ ಕೃಷಿಯಲ್ಲಿ ತೊಡಗಿದೆ.

ಕೃಷಿಗೆ ದುಡ್ಡು ಮಾತ್ರ ಇದ್ದರಾಗದು, ಜನ ಬೇಕು. ಪ್ರಾರಂಭದಲ್ಲಿ (1970-80ರ ದಶಕ) ಕಾರ್ಮಿಕರು ಸಿಗುತ್ತಿದ್ದರು, ಕೆಲಸ ಚೆನ್ನಾಗಿ ಆಗುತ್ತಿತ್ತು, ಕಾರ್ಮಿಕರಿಗೆ ಮುಂಗಡವನ್ನೂ ಕೊಡುತ್ತಿದ್ದೆವು, ಕಷ್ಟಕ್ಕೆ ಒತ್ತಾಸೆಯಾಗಿರುತ್ತಿದ್ದೆವು. ಆರ್ಥಿಕ ದೃಷ್ಟಿಯಿಂದ ಉತ್ಪಾದನೆ ಹೆಚ್ಚಾಗಿರುತ್ತಿತ್ತು, ಬೆಲೆ ಏರಿಕೆಗೆ ತಡೆ ಇತ್ತು. ಕ್ರಮೇಣ 2000ದ ಹೊತ್ತಿಗೆ ನಗರಕ್ಕೆ ವಲಸೆ ಹೆಚ್ಚಾಯಿತು.

ನಗರದಲ್ಲಿ ಬಿ.ಪಿ.ಎಲ್. ಕಾರ್ಡುಗಳು ಲಭ್ಯವಾದುವು, ಹಳ್ಳಿಗಳಲ್ಲಿ ಉಳಿದಿದ್ದವರು ಬಿ.ಪಿ.ಎಲ್. ಪಡೆದುಕೊಂಡರು. ಅಕ್ಕಿ ಕೆ.ಜಿ.ಗೆ 3 ರೂ ಆಯಿತು. ಓಟಿನ ದೃಷ್ಟಿಯಿಂದ ಒಂದು ರೂ ಆಗಿದೆ. ನಾಳೆ ಬಿಟ್ಟಿ ಕೊಡುವುದೂ ಆಗುತ್ತೇನೋ. ಈಗ ನಮ್ಮ 8 ಎಕರೆ, ತೆಕ್ಕಲು, ಬದುಕು ಸಾಮಾನ್ಯ ಮಧ್ಯಮ ಮಟ್ಟದ್ದಾಯಿತು. ಎರಡು ಎಕರೆಗೆ ಕೃಷಿ ಸೀಮಿತವಾಯಿತು.

ಊರಿನಲ್ಲಿದ್ದ ಸಣ್ಣ ರೈತರು, ಕಾರ್ಮಿಕರು ಬಿಪಿಎಲ್ ಪಡೆದರು. ಕುಡಿತ ಹೆಚ್ಚಾಯಿತು. ಒಬ್ಬ ರೈತ ಈ ಸಲ 1 ಎಕರೆಗೆ 6 ಟನ್ ಕಬ್ಬು ಬೆಳೆದಿದ್ದಾನೆ! ಒಂದು ರೂಪಾಯಿಗೆ ಕೆ.ಜಿ. ಅಕ್ಕಿ, ಗೋಧಿ (?) ಕೊಟ್ಟರೆ ದುಡಿಯುವ ಅನಿವಾರ್ಯತೆ ಎಲ್ಲಿದೆ. ಏನೋ ಪುಡಿ ಕೆಲಸ ಮಾಡಿ ಬೇಳೆ, ಎಣ್ಣೆ ಕೊಂಡರೆ ಆಯಿತು. ಯೋಚನೆ ಮಾಡಿ. ದೇಶದಲ್ಲಿ ಆಹಾರ ಉತ್ಪಾದನೆ ಹೇಗೆ ಇಷ್ಟು ಕಡಿಮೆಯಾಯಿತು.

ಪ್ರತಿಯೊಂದು ಕೃಷಿ ಮೂಲದ ಆಹಾರ ಪದಾರ್ಥಗಳ ಬೆಲೆ ಎಷ್ಟು ಏರಿದೆ ನಿಮಗೇ ಗೊತ್ತು. ರಾಜಕಾರಣಿಗಳು ಜನಸಂಪನ್ಮೂಲಕ್ಕೆ ಕೊಡಲಿಪೆಟ್ಟು ಕೊಟ್ಟರು. 1 ರೂ.ಗೆ ಅಕ್ಕಿ ಇತ್ಯಾದಿ ಕ್ರಮಗಳು ಜನರ ನೈತಿಕತೆಯನ್ನೇ ಹಾಳು ಮಾಡಿವೆ. ಆಹಾರ ಪದಾರ್ಥ ಕಣ್ಮರೆಯಾಗುವ ಸ್ಥಿತಿ ಬರಬಹುದು. ಬಿಟ್ಟಿ ಕೊಡುವುದು ಜನರ ಛಲ, ಅಭಿಮಾನ, ಶ್ರಮ ಇತ್ಯಾದಿಗಳನ್ನು ನಾಶಪಡಿಸುತ್ತದೆ.
-ಲಿಂಗಣ್ಣ, ಕೊಪ್ಪ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.