ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ನಿಷ್ಪಕ್ಷಪಾತ ಧೋರಣೆ

Last Updated 27 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಕೇಂದ್ರವು ದೇಶದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಭೂ ಕುಸಿತದ ಗ್ರಾಮಗಳನ್ನು ನಿಭಾಯಿಸಲು ಸ್ವಯಂ ಪ್ರೇರಿತವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ತನ್ನ ಆತ್ಮೀಯ ಏಳು ರಾಜ್ಯಗಳಿಗೆ ರೂ 2892 ಕೋಟಿ  ಗೂ ಅಧಿಕ ಮೊತ್ತದ ಪರಿಹಾರದ ಪ್ಯಾಕೇಜ್ ನಿಗದಿ ಮಾಡಿದೆ.

ಆದರೆ, ಕರ್ನಾಟಕದಲ್ಲಿ ಭೂ ಕುಸಿತ ಇಲ್ಲದ್ದ್ದಿದರೂ ರಾಜ್ಯವು ಅತಿವೃಷ್ಟಿ, ಅನಾವೃಷ್ಟಿಗೆ ಸೇರಿದ ರಾಜ್ಯ ಎಂಬುದು ಕೇಂದ್ರಕ್ಕೆ ಮನವರಿಕೆ ಆಗ್ದ್ದಿದರೂ ರಾಜ್ಯದ ಬಗ್ಗೆ ಉದ್ದೇಶಪೂರ್ವಕವಾಗಿ ಉದಾಸೀನ ಮನೋಭಾವ ತಾಳಿದೆ.

ರಾಜ್ಯದಲ್ಲಿ ಕಾವೇರಿ ನೀರು ಬಿಡುಗಡೆ ವಿಷಯದಲ್ಲಿ ಇಡೀ ಕರ್ನಾಟಕವೇ ಹೋರಾಟ ನಡೆಸುತ್ತಿದ್ದಾಗ್ಯೂ ಕೇಂದ್ರವನ್ನು ರಾಜ್ಯದಿಂದ ಪ್ರತಿನಿಧಿಸುವ ರಾಜಕೀಯ ಮುಖಂಡರು ಆಸಕ್ತಿಯನ್ನು ವಹಿಸದೆ ಅವರೆಲ್ಲಾ ಕೇಂದ್ರ ಸರ್ಕಾರದ ಜೋಪಾನ ಮಾಡುವಲ್ಲಿ ನಿರತರಾಗಿದ್ದರು!

ಮೊದಲಿನಿಂದಲೂ ರಾಜ್ಯದ ಅಗತ್ಯಗಳ ಬಗ್ಗೆ ಆಸಕ್ತಿವಹಿಸದೆ ಕೇವಲ ಬಿಜೆಪಿ ಮತ್ತು ಸರ್ಕಾರವನ್ನು ಟೀಕಿಸಿದ ಮಾತ್ರಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದುಬಿಡುತ್ತಾ?

ಕೇಂದ್ರವು  ಕರ್ನಾಟಕವೂ ನಮ್ಮದೇ ಒಂದು ರಾಜ್ಯ ಎಂದು ಇನ್ನಾದರೂ ಭಾವಿಸಿ, ನಿಷ್ಪಕ್ಷಪಾತವಾಗಿ ಪ್ಯಾಕೇಜುಗಳನ್ನು ನಿಗದಿಪಡಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT