ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಹಣ ಬಿಡಲಿ

Last Updated 10 ಮಾರ್ಚ್ 2016, 19:45 IST
ಅಕ್ಷರ ಗಾತ್ರ

ಮೊನ್ನೆ ಘಟಿಸಿತು
ವರ್ಷದ ಪ್ರಥಮ ಸೂರ್ಯಗ್ರಹಣ
ವಿಜ್ಞಾನಿಗಳು ಪ್ರಕೃತಿಯ ಈ ವಿಸ್ಮಯವನ್ನು
ಕಣ್ತುಂಬಿಕೊಂಡು ಆನಂದಿಸಿದರೆ
ಇತ್ತ ಮಡಿವಂತರು ಮೂಢನಂಬಿಕೆಯ
ಗಾಢಾಂಧಕಾರದಲ್ಲಿ ಮುಳುಗಿದರು,
ವಿಜ್ಞಾನ ಆಕಾಶದೆತ್ತರಕ್ಕೆ ಬೆಳೆದರೂ
ಚಂದ್ರ, ಮಂಗಳನ ಅಂಗಳದಲ್ಲಿ
ಅಡಗಿರುವ ರಾಶಿ ರಾಶಿ ವಿಸ್ಮಯಗಳನ್ನು
ತಂದು ಸುರಿದರೂ
ಅಂಧ ಜನರ ಬುದ್ಧಿಗೆ ಹಿಡಿದ ರಾಹು
ಕೇತುಗಳನ್ನು ಬಿಡಿಸಲು ಮಾತ್ರ
ಸಾಧ್ಯವಾಗಲಿಲ್ಲ,
ಇನ್ನೂ ಎಷ್ಟು ಶತಮಾನಗಳು ಬೇಕೋ
ಜನರ ಬುದ್ಧಿಗೆ ಕವಿದ ಮೂಢನಂಬಿಕೆಯ
ಗ್ರಹಣ ಬಿಡಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT