ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಎಲ್‌. ರಾಹುಲ್ ವಿರುದ್ಧ ಗೋಯಂಕ ರೇಗಾಟ: ‘ನಾಚಿಕೆಗೇಡು’ ಎಂದ ಮೊಹಮ್ಮದ್ ಶಮಿ

Published 10 ಮೇ 2024, 12:41 IST
Last Updated 10 ಮೇ 2024, 12:41 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡದ ಆಟಗಾರ ಕೆ.ಎಲ್‌.ರಾಹುಲ್ ಅವರನ್ನು ಟಿ.ವಿ. ಕ್ಯಾಮೆರಾಗಳ ಮುಂದೆಯೇ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಲಖನೌ ಸೂಪರ್‌ ಜೈಂಟ್ಸ್‌ ಮಾಲೀಕ ಸಂಜೀವ ಗೋಯಂಕ ಅವರ ವರ್ತನೆ ‘ನಾಚಿಕೆಗೇಡಿನದ್ದು’. ಕ್ರೀಡೆಯಲ್ಲಿ ಇಂಥದ್ದಕ್ಕೆ ಸ್ಥಾನವಿಲ್ಲ ಎಂದು ವೇಗದ ಬೌಲರ್‌ ಮೊಹಮ್ಮದ್ ಶಮಿ ಪ್ರತಿಕ್ರಿಯಿಸಿದ್ದಾರೆ.

ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಬುಧವಾರ ನಡೆದ ಪಂದ್ಯದಲ್ಲಿ ಲಖನೌ ತಂಡ 10 ವಿಕೆಟ್‌ ಮುಖಭಂಗ ಅನುಭವಿಸಿದ ನಂತರ ಆರ್‌ಪಿಜಿ ಸಮೂಹದ ಮುಖ್ಯಸ್ಥ ಸಂಜೀವ್ ಗೋಯಂಕಾ ಅವರು ತಂಡದ ನಾಯಕ  ರಾಹುಲ್‌ ವಿರುದ್ಧ ರೇಗಾಡಿದ ಮತ್ತು ರಾಹುಲ್ ಸಂಯಮದಿಂದ ಇರುವ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

‘ಇದನ್ನು ಕೋಟಿಗಟ್ಟಲೆ ಜನ ನೋಡುತ್ತಾರೆ. ಕ್ಯಾಮೆರಾಗಳ ಮುಂದೆ ಹೀಗೆ ಮಾಡುವುದು, ಅದಕ್ಕೆ ಜನ ಪ್ರತಿಕ್ರಿಯಿಸವುದು ಇವೆಲ್ಲಾ ನಾಚಿಕೆಗೇಡು. ಆಡುವ ಮಾತುಗಳಿಗೆ ಇತಿಮಿತಿ ಇರಬೇಕು. ಹೀಗೆ ಕೋಪದಿಂದ ಮಾತನಾಡುವುದು ತಪ್ಪು ಸಂದೇಶ ರವಾನಿಸುತ್ತದೆ’ ಎಂದು ಶಮಿ ಕ್ರಿಕ್‌ಬಝ್‌ ಲೈವ್‌ಗೆ ತಿಳಿಸಿದ್ದಾರೆ.

ಕಳೆದ ವರ್ಷದ ಕೊನೆಯಲ್ಲಿ ಏಕದಿನ ವಿಶ್ವಕಪ್‌ ಆಡಿದ್ದ ನಂತರ ಶಮಿ ಹಿಮ್ಮಡಿ ನೋವಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚೇತರಿಕೆಯ ಹಾದಿಯಲ್ಲಿರುವ ಅವರು ಐಪಿಎಲ್‌ನಲ್ಲಿ ಆಡಿಲ್ಲ.

‘ಇಂಥ ಪ್ರತಿಕ್ರಿಯೆ ಖಾಸಗಿಯಾಗಿರಬೇಕು. ಕ್ಯಾಮೆರಾಗಳ ಎದುರು ಅಲ್ಲ’ ಎಂದು ಟಿವಿ ವೀಕ್ಷಕ ವಿವರಣೆಗಾರರಾದ ಗ್ರೇಮ್‌ ಸ್ಮಿತ್ ಮತ್ತು ಸ್ಕಾಟ್‌ ಸ್ಟೈರಿಸ್‌ ಅಭಿಪ್ರಾಯಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT