ಹಲವು ವರ್ಷಗಳಿಂದ ಮಾರ್ಚ್ ಹದಿನೈದನ್ನು ಬಳಕೆದಾರರ ದಿನ ಎಂದು ಆಚರಿಸುತ್ತಿದ್ದರೂ ಕೇಂದ್ರ ಸರ್ಕಾರದ ಹಲವು ಇಲಾಖೆಗಳ ಸೇವೆಯಲ್ಲಿ ಕೊರತೆಗಳು ಈಗಲೂ ಉಳಿದಿವೆ. ಅದರಲ್ಲಿ ಇಂದಿಗೂ ಜಾರಿಗೆ ಬರದ ಒಂದು ಸೇವೆ– ಸ್ಥಳೀಯ ನುಡಿಯ ಬಳಕೆ.

ಕರ್ನಾಟಕದಲ್ಲಿರುವ ಕೇಂದ್ರದ ಹಲವಾರು ಕಚೇರಿಗಳಲ್ಲಿ ಕನ್ನಡ ಬಳಕೆ ಇಲ್ಲ. ಬ್ಯಾಂಕ್, ಅಂಚೆಮನೆ, ವಿಮಾನ ನಿಲ್ದಾಣ ಹೀಗೆ ಹಲವೆಡೆ ಕನ್ನಡ ಕಾಣೆಯಾಗಿದೆ. ರೈಲು ನಿಲ್ದಾಣದಲ್ಲಿನ ಮಾಹಿತಿ, ರೈಲು ಬೋಗಿಯ ಬಾಗಿಲಿಗೆ ಅಂಟಿಸುವ ಅಂದಿನ ಪಯಣಿಗರ ಪಟ್ಟಿ, ಒಳಗೆ ಸುರಕ್ಷಿತ ಮಾಹಿತಿ... ಈ ಎಲ್ಲವೂ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಇರುತ್ತವೆ.

ರೈಲ್ವೆ ಇಲಾಖೆಯವರು ಪಯಣ ಚೀಟಿಯನ್ನು ಅಂತಿಮಗೊಳಿಸುವಾಗಲೂ ಪಯಣಿಗರ ಜೊತೆ ಕನ್ನಡದಲ್ಲಿ ಮಾತನಾಡುವುದಿಲ್ಲ. ರಾಜ್ಯದೊಳಗೆ ಓಡಾಡುವ ರೈಲು ಗಳಲ್ಲಿ ಕನ್ನಡ ಇಲ್ಲದಿದ್ದರೆ ಇದೆಂಥ ಗ್ರಾಹಕ ಸೇವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.