ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿದಂಬರಂ, ಬಡವರು ಹಾಗೂ ಪ್ರಾಮಾಣಿಕತೆ

Last Updated 4 ನವೆಂಬರ್ 2012, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ದೆಹಲಿಯಲ್ಲಿ ಹಣಕಾಸು ಸಂಸ್ಥೆಯೊಂದರ ಸಭೆಯಲ್ಲಿ ಮಾತನಾಡುತ್ತಾ ಕೇಂದ್ರದ ಹಣಕಾಸು ಸಚಿವರಾದ ಚಿದಂಬರಂ ಅವರು “ಬಡವರು ಹೆಚ್ಚು ಪ್ರಾಮಾಣಿಕರು. ಅವರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುತ್ತಾರೆ, ಬಾಕಿ ಉಳಿಸಿಕೊಳ್ಳಲು ಬಯಸುವುದಿಲ್ಲ” ಎಂಬ ಮಾತುಗಳನ್ನಾಡಿರುತ್ತಾರೆ. (ಪ್ರ.ವಾ. 25.10.12).

ಸಚಿವರಿಗೆ ತಡವಾಗಿ ಈ ಸತ್ಯ ತಿಳಿಯಿತೋ ಅಥವಾ ತಿಳಿದಿದ್ದರೂ ಈವರೆಗೆ ಬಾಯಿಬಿಟ್ಟು ಹೇಳಿರಲಿಲ್ಲವೋ ಗೊತ್ತಿಲ್ಲ. ಅಂತೂ ಅವರ ಬಾಯಿಂದ ಸತ್ಯವೊಂದು ಹೊರಬಿದ್ದಿದೆ.
ಈಗ ಅವರೂ ಸೇರಿದಂತೆ ಪ್ರಜ್ಞಾವಂತರೆಲ್ಲರೂ ವಿಮರ್ಶಿಸಬೇಕಾದ ವಿಚಾರವೆಂದರೆ ಈ ದೇಶದಲ್ಲಿ ಪ್ರಾಮಾಣಿಕರಾಗಿರುವ ಕಾರಣಕ್ಕೇ ಬಡವರು ಬಡವರಾಗಿ ಉಳಿದುಕೊಂಡಿದ್ದಾರೆಯೇ? ಹಾಗಿದ್ದಲ್ಲಿ ನಮ್ಮ ವ್ಯವಸ್ಥೆಯನ್ನೇ ಪ್ರಶ್ನಿಸಬೇಕಾಗುತ್ತದೆ.
 
ಬಡವರಾಗಿದ್ದಕ್ಕೇ ಪ್ರಾಮಾಣಿಕರಾಗಿ ಉಳಿದುಕೊಂಡಿದ್ದಾರೆಂದರೆ ದೇಶದ ಪ್ರಜೆಗಳೆಲ್ಲರೂ ಬಡವರಾಗಲಿ ಎಂದು ಹಾರೈಸಬೇಕಾದೀತು! ಒಂದು ಮಾತಂತೂ ನಿಜ. ದೇಶದಲ್ಲಿ ಬಹುಸಂಖ್ಯೆಯ ಬಡವರು (ಮತದಾರರು?) ಇರಲಿ ಎಂಬುದೇ ಪ್ರಭುತ್ವದ ಆಶಯ.

ಇನ್ನು ಅಂತರ ರಾಷ್ಟ್ರೀಯ ಸಮೀಕ್ಷಾಕಾರರ ವರದಿಗಳಲ್ಲಿ ಭಾರತದಲ್ಲಿ ಬಡವರ ಸಂಖ್ಯೆಯಲ್ಲಾದ ಏರಿಕೆಗಳನ್ನು ಪ್ರಾಮಾಣಿಕರ ಸಂಖ್ಯೆಯಲ್ಲಿನ ಹೆಚ್ಚಳವೆಂದು ನಮೂದಿಸುವಂತೆ ಕೋರಬೇಕಾಗಿದೆ. ಇಲ್ಲವೆ `ಬಡವರು~ ಎಂಬುದನ್ನು `ಪ್ರಾಮಾಣಿಕರು~ ಎಂದು ತಿದ್ದಿ ಓದಬೇಕಾಗುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಚಿದಂಬರಂ ಅವರೇ ಹಣಕಾಸು ಸಚಿವರಾಗಿದ್ದಾಗ ದೇಶದ ರೈತರ ಸಾಲಮನ್ನಾ ಘೋಷಿಸಿದ್ದರು. ಆದರೆ ಅದಾಗಲೇ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿದ್ದ ಬಡ (ಪ್ರಾಮಾಣಿಕ-ಅವರದೇ ಮಾತಿನಲ್ಲಿ) ರೈತರನ್ನು ಪರಿಗಣಿಸದೇ ಅನ್ಯಾಯ ಮಾಡಿದ್ದರು!
ಇದಕ್ಕೆ ಅವರು ಏನೆನ್ನುವರೋ ಗೊತ್ತಿಲ್ಲ.
        
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT