ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಮಧ್ಯಾಹ್ನದ ಬಿಸಿಯೂಟ ಉಣಬಡಿಸಲು ನೆರವಾಗುತ್ತಿರುವುದು ಮೆಚ್ಚುಗೆಯ ಕೆಲಸ (ಪ್ರ.ವಾ., ಅ. 1).

ಬಹು ದೂರದಿಂದ ಬರುವ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳು ಬೆಳಿಗ್ಗೆ ಮನೆಯಿಂದ ಹೊರಟು ತರಗತಿಗಳನ್ನು ಮುಗಿಸಿಕೊಂಡು ಮನೆ ಸೇರುವಷ್ಟರಲ್ಲಿ ಸಂಜೆಯಾಗುತ್ತದೆ. ಇತ್ತ ಬೆಳಿಗ್ಗೆ ಸರಿಯಾದ ತಿಂಡಿಯೂ ಇಲ್ಲದೆ, ಅತ್ತ ಮಧ್ಯಾಹ್ನ ಊಟವೂ ಇಲ್ಲದೆ ತೊಂದರೆಪಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಇಂದಿಗೂ ದೊಡ್ಡದಿದೆ. ಹಸಿವಿನಿಂದಿರುವಾಗ ವಿದ್ಯಾರ್ಥಿಗಳು ಪಾಠದ ಕಡೆ ಗಮನ ಕೊಡುವುದಾದರೂ ಹೇಗೆ?

ಇಂತಹ ಪರಿಸ್ಥಿತಿಯನ್ನು ಅರಿತ ಉಪನ್ಯಾಸಕರು ವರ್ಷಕ್ಕೆ ತಲಾ ₹ 2,000 ನೀಡಿ ವಿದ್ಯಾರ್ಥಿಗಳ ಕಷ್ಟದಲ್ಲಿ ಭಾಗಿಯಾಗುತ್ತಿರುವುದು ಅನುಕರಣೀಯ. ಬಡ ವಿದ್ಯಾರ್ಥಿಗಳು ಎಲ್ಲಾ ಕಾಲೇಜುಗಳಲ್ಲೂ ಕಂಡುಬರುತ್ತಾರೆ. ಇತರೆ ಕಾಲೇಜಿನ ಅಧ್ಯಾಪಕರು, ಸಿಬ್ಬಂದಿ ವರ್ಗಕ್ಕೆ ಇದು ಮಾದರಿಯಾಗಲಿ. ಈ ಮಾರ್ಗ ಅನುಸರಿಸಿದರೆ ಕಳೆದುಕೊಳ್ಳುವುದು ಅತೀ ಕಡಿಮೆ, ಗಳಿಸುವ ತೃಪ್ತಿ ಅಪಾರ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.