ತಿರುವನಂತರಪುರ: ಎರಡು ಅಧಿಕಾರಯುತ ಗೆಲುವುಗಳೊಂದಿಗೆ ಆತ್ಮವಿಶ್ವಾಸದಲ್ಲಿರುವ ಭಾರತ ತಂಡ ಶುಕ್ರವಾರ ಇಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಮೂರನೇ ಟಿ20 ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.

ಭಾರತ ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್– ಈ ಎರಡೂ ವಿಭಾಗಗಳಲ್ಲಿ ಪ್ರಾಬಲ್ಯ ಮೆರೆದಿದ್ದು, ವಿಶಾಖಪಟ್ಟಣದಲ್ಲಿ ನಡೆದ ಪಂದ್ಯಗಳಲ್ಲಿ ಕ್ರಮವಾಗಿ ಎಂಟು ಮತ್ತು ಏಳು ವಿಕೆಟ್ಗಳ ಜಯಗಳಿಸಿತ್ತು. ದ್ವೀಪರಾಷ್ಟ್ರದ ವಿರುದ್ಧ ಇದು ಭಾರತ ತಂಡ ಆಡಿದ ಕೊನೆಯ 11 ಪಂದ್ಯಗಳಲ್ಲಿ ಒಂಬತ್ತರಲ್ಲಿ ಗೆಲುವು ಸಾಧಿಸಿದೆ. ಲಂಕಾ 2024ರ ಜುಲೈನಲ್ಲಿ ದಂಬುಲ್ಲಾದಲ್ಲಿ ಕೊನೆಯ ಬಾರಿ ಗೆಲುವು ಕಂಡಿತ್ತು.

ಭಾರತದ ಬ್ಯಾಟಿಂಗ್ ಬಲಾಢ್ಯವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೊಸದಾಗಿ ಸಾರಥ್ಯ ವಹಿಸಿರುವ ಜೆಮಿಮಾ ರಾಡ್ರಿಗಸ್ ಮೊದಲ ಪಂದ್ಯದಲ್ಲಿ ಮಿಂಚಿದರೆ, ಶಫಾಲಿ ವರ್ಮಾ ಎರಡನೇ ಪಂದ್ಯದಲ್ಲಿ ಅಜೇಯ ಅರ್ಧ ಶತಕ ಬಾರಿಸಿದರು. ಬೌಲರ್ಗಳೂ ನಿರಾಸೆ ಮೂಡಿಸಲಿಲ್ಲ. ಎನ್.ಶ್ರೀಚರಣಿ ಜೊತೆ ಸರಣಿಯಲ್ಲಿ ಪದಾರ್ಪಣೆ ಮಾಡಿದ ಸ್ಪಿನ್ನರ್ ವೈಷ್ಣವಿ ಶರ್ಮಾ, ವೇಗಿ ಕ್ರಾಂತಿ ಗೌಡ ಅವರು ಪರಿಣಾಮಕಾರಿ ಎನಿಸಿದ್ದಾರೆ. ಶ್ರೀಲಂಕಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ್ದಾರೆ. ಅನುಭವಿ ದೀಪ್ತಿ ಶರ್ಮಾ ಜ್ವರದ ಕಾರಣ ಎರಡನೇ ಪಂದ್ಯ ಆಡಲಿಲ್ಲ. ಅವರ ಬದಲು ಸ್ನೇಹಾ ರಾಣಾ ಅವಕಾಶ ಪಡೆದು 4 ಓವರುಗಳಲ್ಲಿ 11 ರನ್ನಿತ್ತು 1 ವಿಕೆಟ್ ಪಡೆದಿದ್ದರು.

ಆದರೆ ಫೀಲ್ಡಿಂಗ್ನಲ್ಲಿ ಮಾತ್ರ ಹರ್ಮನ್ಪ್ರೀತ್ ಸಾರಥ್ಯದ ತಂಡ ಸುಧಾರಣೆ ಕಾಣಬೇಕಾಗಿದೆ. ಮೊದಲ ಪಂದ್ಯದಲ್ಲಿ ತಂಡ ಐದು ಕ್ಯಾಚ್ಗಳನ್ನು ಕೈಚೆಲ್ಲಿತ್ತು. ಎರಡನೇ ಪಂದ್ಯದಲ್ಲಿ ಅಲ್ಪ ಸುಧಾರಣೆಯಾಗಿದ್ದು, ಉತ್ತಮ ಕ್ಷೇತ್ರರಕ್ಷಣೆಯ ಫಲವಾಗಿ ಲಂಕಾದ ಮೂವರು ರನೌಟ್ ಆಗಿದ್ದರು.

ತಂಡ ತನ್ನ ಆಟದ ಮಟ್ಟ ಏರಿಸಿ ಸರಣಿ ಗೆಲ್ಲುವ ಉತ್ಸಾಹದಲ್ಲಿದೆ. ತಿರುವನಂತಪುರದಲ್ಲಿ ಕೊನೆಯ ಮೂರು ಪಂದ್ಯಗಳು ನಡೆಯಲಿವೆ.

ಎರಡು ಸೋಲುಗಳಿಂದ ಜರ್ಝರಿತವಾಗಿರುವ ಶ್ರೀಲಂಕಾ ಈಗ ಬ್ಯಾಟಿಂಗ್ ಬಲಪಡಿಸಿಕೊಳ್ಳುವತ್ತ ಚಿತ್ತ ಹರಿಸಲಿದೆ. ತಂಡ ಎರಡೂ ಪಂದ್ಯಗಳಲ್ಲಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ವಿಫಲವಾಗಿತ್ತು. ಪ್ರಮುಖ ಆಟಗಾರ್ತಿಯರಾದ ವಿಶ್ಮಿ ಗುಣರತ್ನೆ, ಹಸಿನಿ ಪೆರೀರಾ, ಹರ್ಷಿತಾ ಸಮರವಿಕ್ರಮ ನಿಧಾನಗತಿಯಲ್ಲಿ ಆಡಿದ್ದರು. ಬೌಂಡರಿಗಳು ಬತ್ತಿದ್ದವು.

‘ನಾವು ಅನಗತ್ಯವಾಗಿ ಒತ್ತಡಕ್ಕೆ ಒಳಗಾದೆವು. ಒಂದೊಂದು ರನ್ ಗಳಿಸುವುದಕ್ಕೇ ನಾವು ಪ್ರಯತ್ನಿಸಿದೆವು. ಹೆಚ್ಚು ಬೌಂಡರಿಗಳನ್ನು ಗಳಿಸಬೇಕಾದ ಅಗತ್ಯವಿದೆ. 150ಕ್ಕಿಂತ ಹೆಚ್ಚು ಮೊತ್ತ ಕಲೆಹಾಕಬೇಕಾಗಿದೆ’ ಎಂದು ನಾಯಕಿ ಚಾಮರಿ ಅಟಪಟ್ಟು ಎರಡನೇ ಪಂದ್ಯದ ನಂತರ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.