ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಕಟ್ಟುವುದೇಕೆ?

Last Updated 3 ಜೂನ್ 2015, 19:30 IST
ಅಕ್ಷರ ಗಾತ್ರ

‘ರಸ್ತೆ ಸದ್ಬಳಕೆ ಹೇಗೆ?’ (ಸಂಗತ. ಜೂನ್‌ 2) ಲೇಖನ ಓದಿದೆ. ರಸ್ತೆಯಲ್ಲಿ ನಿಲ್ಲಿಸುವ ವಾಹನಗಳಿಗೆ ಶುಲ್ಕ ವಿಧಿಸುವುದು ಸರಿಯಾದ ಕ್ರಮ. ಆದರೆ ಶೇ 15ರಷ್ಟು ಮಾರಾಟ ತೆರಿಗೆ ಮತ್ತು ಅಷ್ಟೇ ಪ್ರಮಾಣದಲ್ಲಿ ಮು೦ಗಡವಾಗಿ ರಸ್ತೆ ತೆರಿಗೆಯನ್ನು ಜನ ಸಲ್ಲಿಸುವುದು ಏತಕ್ಕಾಗಿ ಎ೦ಬ ಪ್ರಶ್ನೆ ಕಾಡುವುದು ಸಹಜ.

ಜನ ಹೆಚ್ಚಾಗಿ ಹೋಗದ ಸ್ಥಳಗಳಲ್ಲಿ ಅಗಲವಾದ ಕಾಲುದಾರಿ ಮಾಡಿ, ವಾಹನಗಳ ನಿಲುಗಡೆಗೆ ಏನೂ ವ್ಯವಸ್ಥೆ ಮಾಡದ ಬಿಬಿಎಂಪಿ, ಬೆ೦ಗಳೂರಿನ ವಾಹನ ಮಾರಾಟ ಮಳಿಗೆಗಳನ್ನೇ ಸ್ಥಗಿತಗೊಳಿಸಿದರೆ ಹೇಗೆ? ಸರಿಯಾದ ರಸ್ತೆಗಳು ಮತ್ತು ನಿಲುಗಡೆ ವ್ಯವಸ್ಥೆ ಇಲ್ಲದಿದ್ದರೆ ಜನ ಯಾವ ಕಾರಣಕ್ಕಾಗಿ ವಾಹನಗಳನ್ನು ಖರೀದಿಸಬೇಕು?

ಸ೦ಚಾರ ಪೊಲೀಸರು ಇಲ್ಲ-ಸಲ್ಲದ ರೀತಿಯಲ್ಲಿ, ಅಡ್ಡ ರಸ್ತೆಗಳಲ್ಲಿ ಕೂಡ ‘ನೋ ಪಾರ್ಕಿಂಗ್‌’ ಫಲಕಗಳನ್ನು ಹಾಕಿ, ಸ೦ಚಾರಕ್ಕೆ ಅಡಚಣೆಯಾಗದಂತೆ ನಿಲ್ಲಿಸಿದ ವಾಹನಗಳಿಗೂ ದ೦ಡ ವಿಧಿಸುವ ಅಕೃತ್ಯದ ಬಗ್ಗೆ ಲೇಖನದಲ್ಲಿ ಪ್ರಸ್ತಾಪ ಮಾಡಿಲ್ಲ. ಅಷ್ಟೇ ಅಲ್ಲ, ವಿದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳು ಯಾವ ರೀತಿ ನಿಲುಗಡೆ  ವ್ಯವಸ್ಥೆ ಮಾಡುತ್ತವೆ ಎ೦ಬುದರ ಬಗ್ಗೆಯೂ ಉಲ್ಲೇಖಿಸಿಲ್ಲ. ಆ ದೇಶಗಳಲ್ಲಿ ರಸ್ತೆ ಬದಿ ಸುಸಜ್ಜಿತವಾಗಿ ಕಾಯ್ದಿರಿಸಿದ ಪಾರ್ಕಿ೦ಗ್ ವ್ಯವಸ್ಥೆಯ ಜತೆಗೆ ಶುಲ್ಕ ಸಲ್ಲಿಸುವ ಯ೦ತ್ರಗಳೂ ಇರುತ್ತವೆ.

ನಮ್ಮ ಪೊಲೀಸರು ಸೂಕ್ತ ನಿಲುಗಡೆಗೆ ಅವಕಾಶ ಕಲ್ಪಿಸದೆ ದ೦ಡ ವಿಧಿಸುವ ಚಾಳಿಯನ್ನು ನಿಲ್ಲಿಸಬೇಕು. ಬಿಬಿಎಂಪಿ ಸರಿಯಾದ ನಿಲುಗಡೆ ವ್ಯವಸ್ಥೆ ಮಾಡಬೇಕು. ಅದು ಬಿಟ್ಟು, ತನ್ನ ಅಧಿಕಾರಿಗಳಿಗೆ ಪ್ರಿಯವಾದ ಗುತ್ತಿಗೆದಾ ರರಿಗೆ ಕಡಿಮೆ ವೆಚ್ಚದಲ್ಲಿ ಶುಲ್ಕ ವಸೂಲಿ ಮಾಡುವ ಗುತ್ತಿಗೆ ವಹಿಸಿಕೊಟ್ಟರೆ ಬಿಬಿಎಂಪಿಗೆ ಏನೂ ಪ್ರಯೋಜನವಾಗದು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT