ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಯಲು ಕೆಲಸ ಕೊಡಿ

Last Updated 25 ಫೆಬ್ರುವರಿ 2015, 16:45 IST
ಅಕ್ಷರ ಗಾತ್ರ

ಲೈಂಗಿಕ ಅಲ್ಪಸಂಖ್ಯಾತರ ವಿಷಯದಲ್ಲಿ ಸರ್ಕಾರದ ಕಡೆಗಣನೆ ಮತ್ತು ಜನರು ಅವರನ್ನು ಪರಿಗಣಿಸುವ ರೀತಿ ನೋಡಿದರೆ ಬೇಸರ­ವಾಗು­ತ್ತದೆ. ಅವರು ಬಸ್ಸು, ರೈಲು, ರಸ್ತೆ ಸಿಗ್ನಲ್‌ಗಳಲ್ಲಿ ಹಣ ಕೇಳುವ ಪರಿಸ್ಥಿತಿ ಸೃಷ್ಟಿ­ಯಾಗಿರುವುದು ನಮ್ಮ ಸಮಾಜ ಮತ್ತು ಸರ್ಕಾರಗಳ ಬೇಜವಾಬ್ದಾರಿ ನಡೆಯಿಂದ. ಅವರಿಗೆ ಕಷ್ಟಪಟ್ಟು ಕೆಲಸ ಮಾಡಲು ಏನಾಗಿದೆ ಎಂದು ಕೆಲವರು ಕೇಳ­ಬಹುದು. ಅವರು ಕೆಲಸ ಮಾಡಲು ಸಿದ್ಧರಿ­ದ್ದರೂ ಅವರಿಗೆ ಕೆಲಸ ಕೊಡುವವರ ಸಂಖ್ಯೆ ಬೆರಳೆಣಿಕೆ ಮಾತ್ರ.  ಈಗಲಾದರೂ ಸರ್ಕಾರ ಅವರ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಕೈಗೊಳ್ಳಬೇಕು. ಶಿಕ್ಷಣ, ಸರ್ಕಾರಿ ಉದ್ಯೋಗ­ದಲ್ಲಿ ಅವರಿಗೆ ಮೀಸಲಾತಿ ಕಲ್ಪಿಸಬೇಕು.
ಇದರೊಂದಿಗೆ ಅವರನ್ನು ವಿಶೇಷ ಸಾಮರ್ಥ್ಯ ಇರುವವರು ಎಂದು  ಪರಿಗಣಿಸಿ ಅವರಿಗೆ ಮಾಸಿಕ ಭತ್ಯೆ ನೀಡುವುದರಿಂದ ಲೈಂಗಿಕ ಅಲ್ಪ­ಸಂಖ್ಯಾತರ ಜೀವನವೂ ಸುಧಾರಿಸುತ್ತದೆ. ಅವರು ಬೇರೆ ಯವರ ಎದುರು ಹಣಕ್ಕೆ ಕೈ ಚಾಚುವುದು ತಪ್ಪುತ್ತದೆ.  ಅವರಿಗೆ ಪಡಿತರ ಚೀಟಿ, ಆಧಾರ್ ಸಂಖ್ಯೆ ಮತ್ತು ಗುರುತಿನ ಚೀಟಿಯನ್ನು ವಿತರಿಸುವ ಮುಖಾಂತರ ಅವ­ರನ್ನು ಮುಖ್ಯವಾಹಿನಿಗೆ ತರಬೇಕು.
–ಹಾಲೇಶ್ ಎಂ.ಎಸ್., ಕುವೆಂಪು ವಿ.ವಿ., ಶಂಕರಘಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT