ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಾರಾತ್ಮಕ ಪ್ರಚಾರದ ಫಲಿತಾಂಶ

Last Updated 18 ಮೇ 2014, 19:30 IST
ಅಕ್ಷರ ಗಾತ್ರ

ಈ ಬಾರಿಯ ಲೋಕಸಭಾ ಚುನಾವಣೆ­ಯಲ್ಲಿ ಬಿಜೆಪಿ ನೇತೃತ್ವ ವಹಿಸಿದ್ದ ನರೇಂದ್ರ ಮೋದಿ ವೈಯಕ್ತಿ­ಕವಾಗಿ ವಿವಾದಾತ್ಮಕ ವ್ಯಕ್ತಿಯೋ ಅಲ್ಲವೋ ಎಂಬುದನ್ನು ಪಕ್ಕ­­ಕ್ಕಿಟ್ಟು ನೋಡಿದರೆ, ಬಿಜೆ­ಪಿಯು ಅಭೂತ­ಪೂರ್ವ ಜಯ­ಭೇರಿ ಬಾರಿಸಿರುವು­ದಕ್ಕೆ  ಅನೇಕ ಕಾರಣಗಳಿವೆ.

ಕಾಂಗ್ರೆಸ್‌ ಹಾಗೂ ಬಹುತೇಕ ಇತರ ಪಕ್ಷಗಳ ಮುಖಂಡರು, ಅಲ್ಪ­ಸಂಖ್ಯಾತ ಕೋಮಿ­ನವರ ವೋಟು ಪಡೆಯುವ ರಾಜ­ಕೀಯ ದುರು­ದ್ದೇಶದಿಂದ ಮೋದಿ ವಿರುದ್ಧ ಎಲ್ಲೆಡೆ ಕ್ಷುಲ್ಲಕವಾಗಿ ಮತ್ತು ನಿರಂತ­ರ­ವಾಗಿ ಟೀಕೆ ಮಾಡಿದ್ದು ಸೋಲಿಗೆ ಮುಖ್ಯ ಕಾರಣ. ದೇಶದ ಸಮಸ್ಯೆಗಳ ಬಗ್ಗೆ ಹೆಚ್ಚು ಮಾತನಾಡದೆ ಪ್ರತಿ ಸಂದರ್ಭದಲ್ಲಿ ಕೋಮು­ವಾದಿ,  ಬಂಡವಾಳಶಾಹಿಗಳ ಕೈಗೊಂಬೆ, ನರಹಂತಕ, ರಾಕ್ಷಸ, ಸರ್ವಾಧಿ­ಕಾರಿ ಎಂಬಂತಹ ಮಾತುಗಳನ್ನು ನಿರಂತ­ರ­ವಾಗಿ ಆಡಿದ್ದಾರೆ.

ಇದು ಸಾಲದೆಂಬಂತೆ ಬುದ್ಧಿ­ಜೀವಿ­­ಗಳೆನಿ­ಸಿ­ಕೊಂಡಿರುವ ಕೆಲವರ ಮಾತು­­­ಗಳು ಮತ­ದಾರ­ರನ್ನು ರೊಚ್ಚಿ­­­ಗೆಬ್ಬಿಸಿವೆ. ಇದರಿಂದ  ಭಾರಿ  ಸಂಖ್ಯೆಯಲ್ಲಿ ಮತದಾನ ಮಾಡಿ ತಮ್ಮ ರೋಷವನ್ನು ಹೊರಹಾಕಿ­ರು­ವುದು ಬಿಜೆಪಿ ಗೆಲ್ಲಲು ಮುಖ್ಯ ಕಾರಣ­ವಾಗಿದೆ. ಒಟ್ಟಾರೆ ಕಾಂಗ್ರೆಸ್‌ನ ಮೋದಿ ವಿರುದ್ಧದ ಸಂಪೂರ್ಣ ನಕಾರಾತ್ಮಕ ಪ್ರಚಾ­ರದ ಫಲಿ­­ತಾಂಶ ಇಂದು ನಮ್ಮ ಮುಂದಿದೆ.
–ಡಾ. ಆರ್‌. ವಿಜಯಸಾರಥಿ
ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT