ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಣಾಯಕ ಪಾತ್ರ

Last Updated 10 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಮುಂಬರುವ ಹದಿನಾರನೇ ಲೋಕಸಭಾ ಚುನಾವಣೆ­ಯಲ್ಲಿ ಮೂರು ರಾಜ್ಯಗಳ ಮೂವರು ಮಹಿಳೆಯರು ಸಾಕಷ್ಟು ಮಟ್ಟಿಗೆ ನಿರ್ಣಾ­ಯಕ ಪಾತ್ರ ವಹಿಸಲಿದ್ದಾರೆ ಎಂದು ಅನಿಸುತ್ತಿದೆ. ಆ ಮೂವರು ಮಹಿಳೆಯರೆಂದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡಿನ ಮುಖ್ಯಮಂತ್ರಿ ಜಯ­ಲಲಿತಾ ಮತ್ತು ಉತ್ತರ ಪ್ರದೇಶದ ಮುಖ್ಯ­ಮಂತ್ರಿಯಾಗಿದ್ದಂಥ ಮಾಯಾವತಿ.

ಹಾಗೆ ನೋಡಿದರೆ, ಮಾಯಾವತಿ ನೇತೃತ್ವದ ಬಿ.ಎಸ್‌.ಪಿ., ಮಮತಾ ಬ್ಯಾನರ್ಜಿ ನೇತೃತ್ವದ ತೃಣ­ಮೂಲ ಕಾಂಗ್ರೆಸ್‌, ಮತ್ತು ಜಯಲಲಿತಾ ನೇತೃತ್ವದ ಎ.ಐ.ಎ.ಡಿ.ಎಂ.ಕೆ. ಈ ಮೂರೂ  ಪ್ರಾದೇಶಿಕ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಷ್ಟೆಷ್ಟು ಸ್ಥಾನಗಳನ್ನು ಪಡೆಯ­­ಬಹು­ದೆಂಬುದು ಕೂಡ ಅಷ್ಟೇ ನಿರ್ಣಾ­ಯಕ ಅಂಶವೇ ಆಗಲಿದೆ.

ಕಾಂಗ್ರೆಸ್‌ ಮತ್ತು ಬಿ.ಜೆ.ಪಿ.ಯಂಥ ಪಕ್ಷಗಳು ರಾಷ್ಟ್ರೀಯ ಪಕ್ಷಗಳೇ ಆಗಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಹಲವು ರಾಜ್ಯಗಳ ಪ್ರಾದೇಶಿಕ ಪಕ್ಷ­ಗಳನ್ನು ಸೋಲಿಸುವುದು ಅಷ್ಟು ಸುಲಭ­ವಾ­ಗೇನೂ ಕಾಣುವುದಿಲ್ಲ.

ಹಾಗಾಗಿ, ಕೇಂದ್ರದಲ್ಲಿ ಮತ್ತೆ ಕೆಲವು ಮಿತ್ರ ಪಕ್ಷಗಳ ಸಮ್ಮಿಶ್ರ ಸರ್ಕಾರವೇ ಪುನಃ ಅನಿ­ವಾರ್ಯ ಎಂಬಂತೆ ತೋರುತ್ತದೆ. ಆದರೂ ಮುಂಬ­ರುವ ಲೋಕಸಭಾ ಚುನಾವಣೆಯಲ್ಲಿ  ಕಾಂಗ್ರೆಸ್‌ ಮತ್ತು ಬಿ.ಜೆ.ಪಿ. ಮಹಿಳಾ ಅಭ್ಯರ್ಥಿ­ಗಳಿಗೆ ಸಾಕಷ್ಟು ಅವಕಾಶಗಳನ್ನು ನೀಡುವುದು ಅನಿವಾರ್ಯವೂ ಆಗಬಹುದು ಮತ್ತು ಅದನ್ನು ತಡೆ­ಗ­ಟ್ಟುವುದು ಅಷ್ಟು ಸುಲಭವೂ ಎಂದೆನಿ­ಸು­ವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT