ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಂದವರ ನೋವ...

Last Updated 13 ಮೇ 2018, 19:30 IST
ಅಕ್ಷರ ಗಾತ್ರ

ಜಿ.ವಿ. ಗಣೇಶಯ್ಯ ಅವರ ‘ಬದಲಾವಣೆ ಯಾವಾಗ?’ (ವಾ.ವಾ., ಮೇ 7) ಎಂಬ ಪತ್ರಕ್ಕೆ ಈ ಪ್ರತಿಕ್ರಿಯೆ.

ಒಬ್ಬ ಕೂಲಿ ಕಾರ್ಮಿಕನಿಗೆ ದಿನಕ್ಕೆ ₹ 300 ರಿಂದ 400 ಕೂಲಿ ಸಿಗುತ್ತದೆ. ಅದರಲ್ಲೂ ರಾಜ್ಯ ಬಂದ್, ಜಡಿ ಮಳೆ ಹಿಡಿದರಂತೂ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಕೂಲಿ ಮಾಡುವವರು ಎಷ್ಟೋ ವೇಳೆ ಉಪವಾಸ ಮಲಗಬೇಕಾಗುತ್ತದೆ. ನೀವು ಎಷ್ಟು ದಿನ ಉಪವಾಸ ಮಲಗಿದ್ದೀರಿ ಸ್ವಾಮಿ?

ಶಿವಶರಣೆ ಅಕ್ಕಮಹಾದೇವಿ ಅವರು ನಿಮ್ಮಂಥವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ‘ನೊಂದವರ ನೋವ ನೋಯದವರೇನು ಬಲ್ಲರಯ್ಯಾ’ ಎಂದು ಹೇಳಿರಬೇಕು. ನಾವು ಕೂಲಿ ಕೆಲಸ ಮಾಡಿ ಮಗನನ್ನು ಬಿ.ಇ. ಮಾಡಿಸಿದೆವು (ಹೊಟ್ಟೆ ಬಟ್ಟೆ ಕಟ್ಟಿ). ಅವನ ಒಂದು ದಿನದ ಸಂಬಳ, ಮನೆ ಕೆಲಸ ಮಾಡುವ ಹೆಣ್ಣು ಮಗಳಿಗೆ 2 ತಿಂಗಳ ಸಂಬಳಕ್ಕೆ ಸಮ. ಈಗ ಅವನು ಸಹ ನಿಮ್ಮ ಹಾಗೆಯೇ ಹೇಳುತ್ತಾನೆ.

ಪುಕ್ಕಟೆ ಅಕ್ಕಿ (ಬಟ್ಟೆ ಸೇರಿಸಿ ಸುಳ್ಳು ಹೇಳಿದ್ದೀರಿ) ತೆಗೆದುಕೊಳ್ಳುವವರು ಕೂಲಿ ಕಾರ್ಮಿಕರೇ ವಿನಾ ಅಧಿಕಾರಿಗಳಾಗಲಿ, ಶಾಸಕ– ಸಂಸದರ ಮನೆಯವರಾಗಲಿ ಅಲ್ಲ. ಬದಲಾವಣೆ ಯಾವಾಗ ಎಂದರೆ, ಕೂಲಿ ಕಾರ್ಮಿಕರಿಗೆ, ರಸ್ತೆಯ ಕಸ ಗುಡಿಸುವವರಿಗೆ, ಮೂಟೆ ಹೊರುವ ಹಮಾಲಿಗಳಿಗೆ ದಿನಕ್ಕೆ ₹ 3,000–4,000 ಸಂಬಳ ಅಥವಾ ಕೂಲಿ ಕೊಟ್ಟಾಗ ಅವರು ಪುಕ್ಕಟೆ ಅಕ್ಕಿಗೆ ಕೈ ಒಡ್ಡುವುದಿಲ್ಲ ಎಂಬ ಭರವಸೆ ಕೊಡುತ್ತೇನೆ.

ಕೆ. ಸಿದ್ದಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT