ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೊಟಾ’ಕ್ಕೆ ಮತ ಬೇಡ

Last Updated 5 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ವೃತ್ತಿಪರ ಜನರ ಮಾನಸಿಕ ಕ್ಷಮತೆ ಹಾಗೂ ನಗರ ಪ್ರದೇಶದಲ್ಲಿರುವ ಐ.ಟಿ., ಬಿ.ಟಿ. ಕ್ಷೇತ್ರಗಳ ನೌಕರರನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದರೆ ಯಾವ ಪ್ರಜ್ಞಾವಂತ ಅಧಿಕಾರಿಯೂ ಎರಡನೇ ಶನಿವಾರವನ್ನು ಮತದಾನದ ದಿನವನ್ನಾಗಿ ಆಯ್ಕೆ ಮಾಡುತ್ತಿರಲಿಲ್ಲ. ಹೋಗಲಿಬಿಡಿ, ಆಗಿದ್ದು ಆಗಿಹೋಯಿತು.

ಸ್ವಂತದ ಎಲ್ಲ ಕೆಲಸಗಳನ್ನು ಆ ದಿನದ ಮಟ್ಟಿಗೆ ಬದಿಗೊತ್ತಿ, ವೈಕುಂಠ ಏಕಾದಶಿಯಂದು ದೇವಸ್ಥಾನಗಳಿಗೆ ಹೋಗುವಂತೆ ಆದಷ್ಟು ಬೇಗನೆ ಮತಗಟ್ಟೆಗೆ ಹೋಗಿಬಂದು ಆನಂತರ ಆರಾಮವಾಗಿ ನಿಮ್ಮ ನಿಮ್ಮ ಕಾರ್ಯಗಳನ್ನು ಮುಗಿಸಿಕೊಳ್ಳಿ. ಮತ ಹಾಕದೇ ಚುನಾಯಿತ ಅಭ್ಯರ್ಥಿಗಳ ಬಗ್ಗೆ ‘ಅವನು ಸರಿಯಲ್ಲ’ ಎಂದು ಹೇಳಲು ನಾವು ಅರ್ಹರೇ ಅಲ್ಲ.

ಮತ ಚಲಾಯಿಸಲು ಹೋಗಿ ಅಲ್ಲಿ ‘NOTA’ ಆಯ್ಕೆಯನ್ನು ಒತ್ತಿದರೆ ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ. ನಿಮಗೆ ಅಥವಾ ನಿಮ್ಮ ಸ್ನೇಹಿತರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಯಾರೂ ತಡೆಯಲಿಲ್ಲವಲ್ಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT