ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ಡಾಂಬರು

Last Updated 1 ಫೆಬ್ರುವರಿ 2016, 19:37 IST
ಅಕ್ಷರ ಗಾತ್ರ

‘211 ಕಿ.ಮೀ. ರಸ್ತೆಗೆ ಡಾಂಬರು’ ಹಾಕಲು ಸರ್ಕಾರ ನಿರ್ಧರಿಸಿದೆ (ಪ್ರ.ವಾ., ಜ. 31). ರಸ್ತೆಗಳ ಗುಣಮಟ್ಟ ಉಳಿಸಲು ಮತ್ತು ಕೆಲ ವರ್ಷ ಕೆಡದಂತೆ ಮಾಡುವ ಹಲವು ವಿಧಾನಗಳಲ್ಲಿ ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ (ಎಚ್ಎಎಲ್ ರಸ್ತೆ) ಕೆಲ ವರ್ಷಗಳ  ಹಿಂದೆ ಅಳವಡಿಸಿದ ಒಂದು ಪ್ರಯೋಗ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.

ಪ್ಲಾಸ್ಟಿಕ್‌ ಅನ್ನು ದ್ರಾವಣ ರೂಪದಲ್ಲಿ ಟಾರಿನೊಂದಿಗೆ ಸೇರಿಸಿ ಉಪಯೋಗಿಸಿದಾಗ ರಸ್ತೆಗಳ ಬಾಳಿಕೆ ಕೆಲ ವರ್ಷಗಳವರೆಗೂ ಬರುತ್ತದೆ. ಈ ಪ್ರಯೋಗವನ್ನು ಮೇಲೆ ತಿಳಿಸಿದ ರಸ್ತೆಗಳ ಡಾಂಬರೀಕರಣದಲ್ಲೂ ಮಾಡಲಿ ಮತ್ತು ಪ್ರತಿವರ್ಷ ರಸ್ತೆಗಳ ಮರು ಕಾಮಗಾರಿಗಳಿಗಾಗುವ ಕೋಟಿಗಟ್ಟಲೆ ಹಣದ ಉಳಿತಾಯವಾಗಲಿ.

ಬೆಂಗಳೂರಿನಲ್ಲಿ ರಾಶಿ ರಾಶಿಯಾಗಿ ಬಿದ್ದಿರುವ ಪ್ಲಾಸ್ಟಿಕ್‌ ಕಸದ ವಿಲೇವಾರಿಗೆ ಇದು ಸಹಕಾರಿಯಾಗಬಲ್ಲದು. ಈ ಪ್ರಯೋಗಕ್ಕಾಗಿ ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ರಸ್ತೆಗಳ ಬಾಳಿಕೆಗೆ ಬೇಕಾಗುವ ಇತರ ವಿಧಾನಗಳ ಬಗ್ಗೆಯೂ ಕಾರ್ಯತಂತ್ರ ರೂಪಿಸಬೇಕಾಗಿದೆ. ಇದಕ್ಕಾಗಿ ಪರಿಣತರ ಸಲಹೆ ಪಡೆಯುವುದು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT