ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಸೇವೆ ರದ್ದು

Last Updated 17 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಕೆಂಗೇರಿ ಉಪನಗರ ಹಾಗೂ ಶಿವಾಜಿನಗರದ ನಡುವೆ ಸುಮಾರು 20 ವರ್ಷಗಳಿಂದ ಬಸ್ ಸಂಚಾರದ ವ್ಯವಸ್ಥೆ ಇದೆ. ಆದರೆ ಇತ್ತಿಚಿನ ದಿನಗಳಲ್ಲಿ ಬಸ್ ಸಂಚಾರ ವ್ಯವಸ್ಥೆಯಲ್ಲಿ ತುಂಬಾ ಏರುಪೇರಾಗುತ್ತಿದೆ. ಡಿಪೊ 12ರಲ್ಲಿ ಡಿಪೊ ಮ್ಯಾನೇಜರ್‌ಗಳು ಬದಲಾಗುತ್ತಿರುವುದರಿಂದ 222ಇ ಬಸ್ ಸಂಚಾರವನ್ನು ರದ್ದುಪಡಿಸಲಾಗಿದೆ. ಈ ಕುರಿತು ಡಿಪೊ ಮ್ಯಾನೇಜರ್ ಅವರನ್ನು ವಿಚಾರಿಸಿದರೆ, ಡಿಪೋದಲ್ಲಿ ಬಸ್ ಕಡಿಮೆ ಇರುವುದರಿಂದ ಶಿವಾಜಿನಗರದ ಬಸ್ ಸಂಚಾರವನ್ನು ರದ್ದುಪಡಿಸಿದ್ದೇವೆ ಎಂಬ ಉತ್ತರ ಬರುತ್ತದೆ.

ಇದರಿಂದಾಗಿ ಬೆಳಿಗ್ಗೆ ‌9 ಮತ್ತು 9.40ಕ್ಕೆ (ಮೈಸೂರು ರಸ್ತೆಗೆ ಕೊನೆಯ ಬಸ್) ಶಿವಾಜಿನಗರದಿಂದ ಮೈಸೂರು ರಸ್ತೆ, ಕೆಂಗೇರಿ ಕಡೆ ಬರುವ ನೌಕರ ವೃಂದಕ್ಕೆ ತುಂಬಾ ಅನಾನುಕೂಲವಾಗುತ್ತಿದೆ. ಜನಸಂಖ್ಯೆ ಹೆಚ್ಚಾದಂತೆ ಬಸ್‌ಗಳ ಸಂಚಾರದ ವ್ಯವಸ್ಥೆಯನ್ನು ಹೆಚ್ಚಿಸಬೇಕೇ ವಿನಾ ಇರುವ ಬರುವ ಬಸ್ ಸಂಚಾರವನ್ನು ರದ್ದುಗೊಳಿಸುವುದು ಯಾವ ನ್ಯಾಯ? ಸುಖಕರ ಪ್ರಯಾಣಕ್ಕೆ ಕಾರು, ಸ್ಕೂಟರ್ ಏಕೆ ಬೇಕು, ಸಾರಿಗೆ ಇಲಾಖೆ ಬಸ್‌ಗಳೇ ಸಾಕು ಎಂಬ ಘೋಷಣೆಗಳನ್ನು ಬೇರೆ ಬಸ್‌ಗಳ ಮೇಲೆ ಬರಿದಿದ್ದೀರಲ್ಲಾ?  ಇದು ಬಿಎಂಟಿಸಿಗೆ ಶೋಭೆ ತರುವ ವಿಚಾರವಲ್ಲ. ಇತ್ತ ಜನಪ್ರತಿನಿಧಿಗಳು ಹಾಗೂ ಕ್ಷೇತ್ರದ ಶಾಸಕರು ಗಮನಹರಿಸಿಹೆಚ್ಚಿನ ಬಸ್ ಸೇವೆ ನೀಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT