ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ ಉಳಿಸಿ

Last Updated 22 ಮೇ 2017, 19:30 IST
ಅಕ್ಷರ ಗಾತ್ರ
ಉತ್ತರ ಕರ್ನಾಟಕದ ಜಿಲ್ಲೆಗಳಿಂದ ರಾಜ್ಯದ ಪ್ರಮುಖ ಬಂದರುಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿರುವ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ನಿರ್ಮಿಸಲು ಎರಡು ಲಕ್ಷಕ್ಕೂ ಹೆಚ್ಚು ಮರಗಳ ಹನನ ಆಗಲಿದೆ ಎಂಬುದು ಆಘಾತಕರ. 
 
ಮಳೆಯೇ ಇಲ್ಲದೆ ಒದ್ದಾಡುತ್ತಿದ್ದೇವೆ.  ರೈಲು ಮಾರ್ಗದ ಹೆಸರಿನಲ್ಲಿ ಮತ್ತಷ್ಟು  ಮರಗಳನ್ನು ಕಡಿದರೆ ಏನಾಗಬಹುದು? ರೈತನ ಹೊಟ್ಟೆಗೆ ಕೊಡಲಿ ಇಟ್ಟಂತಾಗುತ್ತದೆ. ಸೌಲಭ್ಯಗಳಿಗಿಂತ  ಬದುಕು ಮುಖ್ಯ.
 
ಆಕಾಶದೆತ್ತರಕ್ಕೆ ಬೆಳೆದ ಮರಗಳನ್ನು ಕಡಿದು ಹಾಕಿದರೆ ಮುಂದೊಂದು ದಿನ ಮಳೆಯೇ ಬಾರದೆ ಊರು ಕೇರಿಗಳೆಲ್ಲ ಬರಡಾಗಿ, ಮರುಭೂಮಿ ಆಗುವುದಲ್ಲಿ ಸಂದೇಹವೇ ಇಲ್ಲ. ಇದನ್ನು ಸರ್ಕಾರ ಅರಿಯಬೇಕು. ಪರಿಸರದ ಬಗ್ಗೆ ಕಾಳಜಿ ತೋರಬೇಕು.
ಶೋಭಾ ಎಂ., ಹಿರೇಮಳಗಾವಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT