ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನದಂಡವೇನು?

Last Updated 16 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ರವೀಂದ್ರನಾಥ ಸಿರಿವರ ಅವರ ನಿರ್ದೇಶನದ ‘ಕೌದಿ’ ಚಿತ್ರದಲ್ಲಿ ನಟಿ ಬಿ.ಜಯಶ್ರೀ ಅವರು ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಆದರೂ ಅವರನ್ನು ‘ಪೋಷಕ ನಟಿ’ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸೂಕ್ತವಲ್ಲ. ಇಂತಹ ಆಯ್ಕೆ ಸಮಿತಿಯಲ್ಲಿ ಒಬ್ಬರಾದರೂ ಸಾಹಿತಿ ಇದ್ದಿದ್ದರೆ ಬಹುಶಃ ಈ ಅಚಾತುರ್ಯ ನಡೆಯುತ್ತಿರಲಿಲ್ಲವೇನೋ!

ಅತ್ಯುತ್ತಮ ನಟಿ ಅಥವಾ ನಟ ಎಂದು ಆಯ್ಕೆ ಮಾಡಲು ಅವರಿಗಿರುವ ವರ್ಚಸ್ಸು, ಅಂದ, ಚಂದ, ಥಳುಕು ಬಳುಕುಗಳನ್ನು  ಪರಿಗಣಿಸಲಾಗುವುದೇ? ಅವರ ಹಾಡು, ನೃತ್ಯ, ಮರ ಸುತ್ತುವ ಗ್ಲ್ಯಾಮರ್‌ ಪಾತ್ರಗಳನ್ನು ಅಥವಾ ಅವರ ವಯಸ್ಸನ್ನು ಪರಿಗಣಿಸಲಾಗುವುದೇ? ‘ಕೌದಿ’ ಸಿನಿಮಾದಲ್ಲಿ ಜಯಶ್ರೀಯವರು ನಿರ್ವಹಿಸಿದ ಪಾತ್ರ ಕಥಾ ನಾಯಕಿಯದ್ದು. ಆದರೂ ಅವರನ್ನು ‘ಪೋಷಕ ನಟಿ’ಯ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸರಿಯಲ್ಲ. ಜಯಶ್ರೀ ಅವರು ಪ್ರಶಸ್ತಿ ಸ್ವೀಕರಿಸದಿರಲು ತೀರ್ಮಾನಿಸಿರುವುದನ್ನು ಗೌರವಿಸುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT