ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯ ನಿಯಂತ್ರಣ ಯಾವಾಗ..?

Last Updated 14 ಜುಲೈ 2014, 19:30 IST
ಅಕ್ಷರ ಗಾತ್ರ

ಹೊಸ ಹೊಸ ವಾಹನಗಳನ್ನು ರಸ್ತೆಗಿಳಿಸಿ ನೂತನ ಪ್ರಯೋಗಗಳನ್ನು ಮಾಡುವ ಬಿಎಂಟಿಸಿಗೊಂದು ಪ್ರಶ್ನೆ. ನಿಮ್ಮ ಸಂಸ್ಥೆಯ ಸಿಟಿ ಬಸ್ಸಿನ ಮಾಲಿನ್ಯವನ್ನು ಹೋಗಲಾಡಿಸುವುದು ಯಾವಾಗ? ಉಳಿದ ವಾಹನ ಸವಾರರ ಮೇಲೆ ಕರುಣೆ ತೋರಲು ಎನ್ನಷ್ಟು ವರ್ಷ ಕಾಯಬೇಕು?
ದಿನನಿತ್ಯ ವಾಹನಗಳಲ್ಲಿ, ಅದರಲ್ಲೂ ದ್ವಿಚಕ್ರ ವಾಹನಗಳಲ್ಲಿ ಓಡಾಡುವ ಸವಾರರಿಗೆ ಈ ಮಾಲಿನ್ಯ ದೊಡ್ಡ ತಲೆನೋವಾಗಿದೆ.

ಸಂಸ್ಥೆಯ ಹಲವು ಬಸ್‌ಗಳು ಕೆಟ್ಟದಾಗಿ ಹೊಗೆ ಉಗುಳುತ್ತವೆ. ಸಿಗ್ನಲ್‌ಗಳಲ್ಲಿ ಕೂಡ ಬಸ್‌ ನಿಲ್ಲಿಸದೇ ‘ಸ್ಟಾರ್ಟ್ ಮೋಡ್‌’ನಲ್ಲಿಯೇ ಇರುತ್ತದೆ. ಈ ಹೊಗೆಯ ಜೊತೆ ಇತರ ವಾಹನಗಳ ಹೊಗೆ, ಒಟ್ಟಿನಲ್ಲಿ ನಮ್ಮಂಥ ವಾಹನ ಸವಾರರ ಪಾಡು ಅಕ್ಷರಶಃ ನರಕಸದೃಶ.

ಖಾಸಗಿ ವ್ಯಕ್ತಿಗಳ ವಾಹನ ಮಾಲಿನ್ಯ  ತಪಾಸಣೆ ಮಾಡಬೇಕಾಗಿರುವವರು ಮೌನ ಧರಿಸಿರುವ ಕಾರಣ, ನಮ್ಮಂಥ ಬಡಪಾಯಿಗಳು ಏನೂ ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ನೀವಾದರೂ ನಮ್ಮ ಮೇಲೆ ಕೃಪೆ ತೋರಿ. ವಾಹನ ಸವಾರರ ಹಿಡಿಶಾಪದಿಂದ ನೀವೂ ಮುಕ್ತರಾಗಿ, ನಮಗೂ ಬದುಕಲು ಬಿಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT