‘ಆಹಾರ ಉತ್ಪನ್ನಗಳ ಮೇಲೆ ಎಕ್ಸ್‌ಪೈರಿ ಡೇಟ್ ಮಾತ್ರ ಇರಲಿ, ಬೆಸ್ಟ್ ಬಿಫೋರ್ ಎಂದು ನಮೂದಿಸುವುದು ಬೇಡ. ಈ ನಿಟ್ಟಿನಲ್ಲಿ ನಿಯಮ ರೂಪಿಸಲು ನಮ್ಮ ಇಲಾಖೆ ಕಾರ್ಯಪ್ರವೃತ್ತವಾಗಲಿದೆ’ ಎಂದು ಕೇಂದ್ರ ಆಹಾರ ಮತ್ತು ಪಡಿತರ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಇಂತಹ ಕ್ರಮ ಒಳ್ಳೆಯದೆ. ಆದರೆ ಈ ಬಗೆಯ ಮಾಹಿತಿಯೆಲ್ಲ ಯಾವ ಭಾಷೆಯಲ್ಲಿರಬೇಕು ಎಂಬುದನ್ನು ಸಚಿವರು ಪ್ರಸ್ತಾಪಿಸಿಲ್ಲ.

ಸಾಮಾನ್ಯವಾಗಿ ಈ ಬಗೆಯ ಮಾಹಿತಿ ಇಂಗ್ಲಿಷ್ ಅಥವಾ ಹಿಂದಿಯಲ್ಲಿರುತ್ತದೆ. ಇದರಿಂದ ಈ ಭಾಷೆಗಳು ಗೊತ್ತಿಲ್ಲದವರಿಗೆ ಇಂತಹ ಮಾಹಿತಿ ಒಂದು ಬಗೆಯಲ್ಲಿ ಗೊಡ್ಡು. ಬಳಕೆದಾರರಿಗಾಗಿ ನೀಡುವ ಮಾಹಿತಿ ಅವರನ್ನೇ ತಲುಪದಿದ್ದರೆ ಅಂತಹ ಮಾಹಿತಿಯನ್ನು ನೀಡುವುದೂ ಒಂದೇ ನೀಡದಿದ್ದರೂ ಒಂದೇ. ಹೀಗಾಗಿ ಎಲ್ಲ ಆಹಾರ ಉತ್ಪನ್ನಗಳ ಮೇಲಿನ ಮಾಹಿತಿ ಆಯಾ ರಾಜ್ಯದ ಭಾಷೆಯಲ್ಲೇ ಇರಬೇಕೆಂದು ಕಟ್ಟಲೆ ಮಾಡಿದರೆ ಒಳ್ಳೆಯದು. ಈ ಮೂಲಕವಾದರೂ ಬಳಕೆದಾರರ ನುಡಿಗಳ ಕಡೆಗಣನೆ ಕೊನೆಯಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.