ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ವರ್ಷಕ್ಕೊಮ್ಮೆ ನಡೆಯಲಿ

Last Updated 24 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

`ಸಾಹಿತ್ಯ ಸಮ್ಮೇಳನ ಮೂರು ವರ್ಷಕ್ಕೊಮ್ಮೆ~ (ಪ್ರ. ವಾ. ಸೆ. 13) ಓದಿದೆ. ಇದು ಒಳ್ಳೆಯ ಚಿಂತನೆ. ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ಸುತ್ತಾ ವೇದಿಕೆ ಮೇಲೆ ನಿಂತು ಕನ್ನಡ ಪರ ಮಾತನಾಡುವ ಬುಡುಬುಡುಕೆ ಸಾಹಿತಿಗಳಿಗೆ ಮಾತ್ರ ಇಂತಹ ಸಮ್ಮೇಳನಗಳು ಪ್ರಯೋಜನಕಾರಿ.


ಗ್ರಾಮೀಣ ಮಕ್ಕಳು ಸಹ ಒಂದಿಷ್ಟು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಮುಂದೆ ಬರಬೇಕೆಂದು ಸರ್ಕಾರವು 6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದ 341 ಶಾಲೆಗಳು ಪ್ರಾರಂಭಿಸಲು ಮುಂದೆ ಬಂದಿದ್ದಾಗ ಈ ಕನ್ನಡ ಸಾಹಿತ್ಯ ಪರಿಷತ್ತಿನವರು ಅಡ್ಡಗಾಲು ಹಾಕಿದರು.

ಸ್ವಾತಂತ್ರ್ಯ ಬರುವ ಮೊದಲು ರಾಜ್ಯಾದ್ಯಂತ ಗ್ರಾಮಾಂತರ ಪ್ರದೇಶದಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಿದ್ದವು. ಕನ್ನಡಕ್ಕೆ ಯಾವ ಕುತ್ತು ಬರಲಿಲ್ಲ. ಹಾಗೂ ಖಾಸಗಿ ಶಾಲೆಗಳಲ್ಲಿ ದೇಶೀಯ (ಕನ್ನಡ) ಕನ್ನಡ ಮಾಧ್ಯಮದ ಶಾಲೆಗಳಿದ್ದವು. ಇಂದು ಅದಕ್ಕೆ ತದ್ವಿರುದ್ಧವಾಗಿ ಎಲ್ಲ ಖಾಸಗಿ ಶಾಲೆಗಳು ಇಂಗ್ಲಿಷ್ ಮಾಧ್ಯಮದ ಶಾಲೆಗಳಾಗಿವೆ.

ಭಾರತದಲ್ಲಿ ಥಾಮಸ್ ಮೆಕಾಲೆ -ಇಂಗ್ಲಿಷ್ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿದವನಿಗೆ ಟೀಕೆ ಮಾಡುವವರು ತಮ್ಮ ಕುಡಿಗಳನ್ನು ಯಾವ ಮಾಧ್ಯಮದಲ್ಲಿ ಓದಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ. ಕನ್ನಡ ಉದ್ಧಾರದ ನಾಟಕ ನಿಲ್ಲಿಸಿ ಕನ್ನಡದ ಉದ್ಧಾರದ ಕೆಲಸದ ಕಡೆಗೆ ಗಮನ ಹರಿಸಲಿ.
 -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT