ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಗಳ ಭಾಷೆ...

Last Updated 12 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಬಿಜೆಪಿಯವರ ಮಟ್ಟಕ್ಕೆ ಇಳಿದು ಮಾತನಾಡಲಾರೆ, ಅದು ಅವರ ಸಂಸ್ಕೃತಿಯನ್ನು  ತೋರುತ್ತದೆ. ಅವರಿಗೆ ಸಂಸ್ಕಾರ, ಮನುಷ್ಯತ್ವ ಯಾವುದೂ ಇಲ್ಲ...’ ಎಂದು ತಮ್ಮ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಪ್ರತಿಕ್ರಿಯಿಸಿದ್ದಾರೆ. ಯೋಗಿ ಆದಿತ್ಯನಾಥ ಅವರ ಟೀಕೆಗೆ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಎಂದಿದ್ದಾರೆ (ಪ್ರ.ವಾ., ಮಾ. 8). ಆದರೆ ಇದಕ್ಕೂ ಮೂರು ದಿನಗಳ ಹಿಂದೆ ಇದೇ ಮುಖ್ಯಮಂತ್ರಿಯವರು ಕಾರ್ಯಕ್ರಮವೊಂದರಲ್ಲಿ ‘ನರೇಂದ್ರ ಮೋದಿ ಒಬ್ಬ ಸುಳ್ಳುಗಾರ, ಪ್ರಧಾನಿಯಾಗಲು ಲಾಯಕ್ಕಿಲ್ಲ, ಇವರಿಗೆ ನಾಚಿಕೆಯಾಗಬೇಕು’ ಎಂದೆಲ್ಲಾ ನಿಂದಿಸಿದ್ದಾರೆ. ಇದು ಇಡೀ ಭಾರತೀಯರಿಗೆ ಮಾಡಿದ ಅವಮಾನವಲ್ಲವೇ? ಯಾರು ಸುಸಂಸ್ಕೃತರು ಎಂಬುದು ಅವರ ನಾಲಿಗೆಯಿಂದಲೇ ತಿಳಿಯುತ್ತದೆ. ಆಚಾರವಿಲ್ಲದ ನಾಲಿಗೆಯ ಭಾಷೆ ಯುವ ಪೀಳಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದರಿಂದ ರಾಜಕಾರಣಿಗಳ ಗೌರವಕ್ಕೇ ಕುಂದು ಉಂಟಾಗುತ್ತದೆ.

ಮುಖ್ಯಮಂತ್ರಿ ಮತ್ತು ಪ್ರಧಾನಿ ಸಂಬಂಧ ಇಷ್ಟು ಹಳಸಿರುವಾಗ ಮಹದಾಯಿ ವಿವಾದ ಇತ್ಯರ್ಥವಾಗಲಾರದು. ರೈತರು, ಕನ್ನಡಪರ ಸಂಘಟನೆಗಳ ಹೋರಾಟದಿಂದ ಮಹದಾಯಿ ಕರ್ನಾಟಕದ ಕಡೆ ಹರಿಯಲಾರಳು.

– ಎಂ. ವೆಂಕಟಪ್ಪ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT