ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿಗೂ ಸ್ಥಾನ ಕೊಡಿ

Last Updated 26 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಉಡುಪಿಯಲ್ಲಿ ನಡೆದ ‘ಧರ್ಮ ಸಂಸತ್‌’ನಲ್ಲಿ ಭಾಗವಹಿಸಿದ ಬಹುತೇಕ ಸ್ವಾಮಿಗಳು ಅಸ್ಪೃಶ್ಯತೆಯನ್ನು ತೊಲಗಿಸುವ ಹಾಗೂ ಹಿಂದೂಗಳ ಉದ್ಧಾರದ ಕಾಳಜಿಯ ಮಾತುಗಳನ್ನಾಡಿದ್ದಾರೆ. ದೇವಾಲಯ ಮತ್ತು ಮನೆಗಳೊಳಗೆ ಎಲ್ಲರಿಗೂ ಪ್ರವೇಶ ಕೊಡಬೇಕು ಎಂದು ಘೋಷಿಸಿದ್ದಾರೆ. ಇದು ಸಾಧ್ಯವೇ ಎಂಬುದು ಈಗಿನ ಪ್ರಶ್ನೆ.

ಅಸ್ಪೃಶ್ಯತೆಗೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ತೀರ್ಮಾನಕ್ಕೂ ಸಂಬಂಧ ಕಲ್ಪಿಸಿ ಆಡುವ ಮಾತುಗಳನ್ನು ನಂಬುವ ಸ್ಥಿತಿ ಈಗ ಇದೆಯೇ? ನೂರಾರು ವರ್ಷಗಳಿಂದ ಜಾತಿ ಭೇದಭಾವಕ್ಕೆ ಸಂಕೇತವಾಗಿರುವ ದೇವಸ್ಥಾನಗಳು ಜಾತೀಯತೆಯನ್ನು ತೊಡೆದುಹಾಕುವ ಕೆಲಸವನ್ನು ಮಾಡಬಲ್ಲವು ಎಂಬ ವಿಶ್ವಾಸ ದಮನಿತರಲ್ಲಿ ಬರುವುದಾದರೂ ಹೇಗೆ? ಉಡುಪಿಗೆ ಬಂದ ಕನಕನಿಗೆ ಆದ ಸ್ಥಿತಿಯೇ ಮುಂದೊಂದು ದಿನ ದಲಿತ, ಅಸ್ಪೃಶ್ಯ ರಾಮಭಕ್ತರಿಗೆ ಆಗಲಾರದು ಎಂದು ನಂಬುವುದು ಹೇಗೆ? ರಾಮ ಮಂದಿರ ನಿರ್ಮಾಣಕ್ಕಾಗಿ ಅದೆಷ್ಟೋ ದಲಿತ, ದಮನಿತರ ಕೈಗಳ ಮೂಲಕ ಇಟ್ಟಿಗೆಗಳು ಅಯೋಧ್ಯೆಯನ್ನು ತಲುಪಿವೆ. ಇಂತಹ ಕೈಗಳಿಗೆ ರಾಮನಿಗೆ ನಮಸ್ಕರಿಸುವ ಅವಕಾಶ ಲಭಿಸುವುದೇ? ರಾಮನನ್ನು ಆರಾಧಿಸುವ ಅವಕಾಶ ಕೆಲವೇ ಕೆಲವರಿಗೆ ಸಿಕ್ಕುವುದೆಂದಾದರೆ ರಾಮ ಮಂದಿರ ನಿರ್ಮಾಣ ಆಗಬೇಕೆನ್ನುವುದು ಇಡೀ ಹಿಂದೂ ಸಮಾಜದ ಅಪೇಕ್ಷೆ ಹೇಗಾಗುತ್ತದೆ?

ರಾಮನ ಆದರ್ಶ ಮತ್ತು ದೈವತ್ವವನ್ನು ದಾಖಲಿಸಿದವರು ವಾಲ್ಮೀಕಿ ಮಹರ್ಷಿ. ಅಂಥ ವಾಲ್ಮೀಕಿಗೆ ದೇಶದಲ್ಲಿ ಅರ್ಹ ಗೌರವ ದೊರೆತಿದೆಯೇ ಎಂದು ಯೋಚಿಸಬೇಕಾಗಿದೆ. ರಾಮನಿಗೆ ಗರ್ಭಗೃಹದಲ್ಲಿ ಸ್ಥಾನ ಕೊಟ್ಟ ವಾಲ್ಮೀಕಿಗೆ ಕನಿಷ್ಠ ಅವನ ಅಕ್ಕ-ಪಕ್ಕದಲ್ಲಾದರೂ ಸ್ಥಾನ ಕೊಡಬೇಕಲ್ಲವೇ? ರಾಮ ಮಂದಿರದ ಜೊತೆಗೆ ವಾಲ್ಮೀಕಿಗೂ ಮಂದಿರ ನಿರ್ಮಾಣ ಮಾಡುವ ನಿರ್ಣಯ ಕೈಗೊಂಡಾಗ ಧರ್ಮ ಸಂಸತ್ತಿನ ತೀರ್ಮಾನಗಳಿಗೆ ಅರ್ಥ ಬರುತ್ತದೆ.

ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT