ಇಂದಿರಾ ಗಾಂಧಿ ಹಂತಕರನ್ನು ‘ಹುತಾತ್ಮರು’ ಎಂದು ವೈಭವೀಕರಿಸಿ, ಅವರ ಕುಟುಂಬದವರನ್ನು ಸನ್ಮಾನಿಸಿರುವ ವಿಷಯ ತಿಳಿದು ನೋವಾಯಿತು. ಸಿಖ್ ವಿದ್ಯಾರ್ಥಿಗಳ ಒಕ್ಕೂಟದ ಆಶ್ರಯದಲ್ಲಿ, ಗುರುದ್ವಾರವೊಂದರಲ್ಲಿ ಅಕಾಲಿದಳದ ಹಿರಿಯರ ಸಮ್ಮುಖದಲ್ಲಿ ಈ ಸನ್ಮಾನ ನಡೆದಿರುವುದು ವಿಷಾದದ ಸಂಗತಿ.

ಹಿಂಸೆಯ, ಕೊಲೆಯ ವೈಭವೀಕರಣ ಸಲ್ಲದು. ಹಿಂಸೆ ಯಾವುದೇ ಸಮಸ್ಯೆಗೂ ಪರಿಹಾರವಲ್ಲ. ಯಾವುದೇ ಧರ್ಮಕ್ಕಿಂತ ‘ರಾಷ್ಟ್ರಧರ್ಮ’ ಸಂವಿಧಾನ ದೊಡ್ಡದು. ಯುವಕರು ಧರ್ಮವನ್ನು ಅನುಸರಿಸುತ್ತಲೇ ಸಹಿಷ್ಣುಗಳಾಗಬೇಕಾದುದು ಇಂದಿನ ತುರ್ತು ಅಗತ್ಯ. ಇಂತಹ ‘ಸನ್ಮಾನ’ಗಳು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.