ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಿ ಮತಗಟ್ಟೆ ಬೇಕು

Last Updated 6 ಮೇ 2018, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ವಿವಿಧ ಬುಡಕಟ್ಟು ಸಮುದಾಯಗಳಿವೆ. ಇಂಥ ಅನೇಕ ಸಮುದಾಯಗಳು ಜನವಸತಿ ಪ್ರದೇಶಗಳಿಂದ ದೂರವಿರುವ ಕಾಡುಮೇಡುಗಳಲ್ಲಿ ಸಣ್ಣ ಸಣ್ಣ ಗುಂಪುಗಳಲ್ಲಿ ವಾಸ ಮಾಡುತ್ತಿವೆ.

ಅಂತೆಯೇ ಸಾರಿಗೆ ಸಂಪರ್ಕವಿಲ್ಲದ ಅನೇಕ ಗ್ರಾಮಗಳೂ ಇದ್ದು, ಸಾವಿರಾರು ಜನರು ಇಂಥ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಅವರಿಗೂ ಮತದಾನದ ಹಕ್ಕು ಇದೆ. ಇಂಥವರು ಯಾವುದೇ ಅಭಿವೃದ್ಧಿಯನ್ನು ಕಾಣದೆ ಕಂಗಾಲಾಗಿದ್ದಾರೆ. ಮತಗಟ್ಟೆಗಳಿಗೆ ಬರಲು ಇವರಿಗೆ ಸಾರಿಗೆ ವ್ಯವಸ್ಥೆ ಸಹ ಇಲ್ಲ. ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳೇ ವಾಹನ ಸೌಲಭ್ಯ ಒದಗಿಸಿ, ಆಮಿಷ ತೋರಿಸಿ ಅವರ ಮತಗಳನ್ನು ಪಡೆಯುವುದೂ ಉಂಟು. ಇದನ್ನು ತಡೆಯುವ ಒಂದು ಉಪಾಯವೆಂದರೆ ‘ಸಂಚಾರಿ ಮತಗಟ್ಟೆ’ ಆರಂಭಿಸುವುದು.

ಇಂಥ ಒಂದು ವ್ಯವಸ್ಥೆಯನ್ನು ರೂಪಿಸಿ, ಈ ಜನರು ಯಾರ ಪ್ರಲೋಭನೆಗೂ ಒಳಗಾಗದಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ಕರ್ತವ್ಯವಾಗಿರುತ್ತದೆ. ಆಯೋಗ ಈ ಬಗ್ಗೆ ಚಿಂತನೆ ನಡೆಸುವುದೇ?

-ದಕ್ಷಿಣಾಮೂರ್ತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT