ರಾಜ್ಯದ ಎಲ್ಲ ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಸಮಂಜಸವಾಗಿದೆ.

ರಸ್ತೆಗೆ ಇಳಿಯುವ ವಾಹನಗಳಲ್ಲಿ ಶೇಕಡ 75ರಷ್ಟು ದ್ವಿಚಕ್ರ ವಾಹನಗಳೇ ಆಗಿವೆ. ಅಪಘಾತ ಸಂಭವಿಸಿದಾಗ ಹಿಂಬದಿಯ ಸವಾರರೇ ಪ್ರಾಣಾಪಾಯಕ್ಕೆ ಸಿಲುಕುವ ಅಪಾಯ ಹೆಚ್ಚು. ಹೆಲ್ಮೆಟ್ ಧರಿಸಿದರೆ ತಲೆಗಾದರೂ ರಕ್ಷಣೆ ಸಿಗುತ್ತದೆ.

ನಗರ–ಪಟ್ಟಣ, ಪಾಲಿಕೆ–ಪುರಸಭೆ ಎಂಬ ವ್ಯತ್ತಾಸ ಇಲ್ಲದೆ ಎಲ್ಲ ಕಡೆಯೂ ಈ ನಿಮಯ ಕಡ್ಡಾಯವಾಗಲಿ. ಅದರಿಂದ ಅತ್ಯಮೂಲ್ಯ ಜೀವ ಉಳಿಯುವಂತಾಗಲಿ. ಇದರ ಜೊತೆಗೆ, ಐಎಸ್‌ಐ ಗುಣಮಟ್ಟದ ಹೆಲ್ಮೆಟ್ ಮಾತ್ರ ಬಳಸುವಂತಾಗಬೇಕು. ಗುಣಮಟ್ಟ ಕೊರತೆಯ ಹೆಲ್ಮೆಟ್‌ಗಳ ಮಾರಾಟವನ್ನು ಸರ್ಕಾರ ನಿಷೇಧಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.