ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳಾಂತರ ಬೇಡ

ಅಕ್ಷರ ಗಾತ್ರ

ಶಾಸಕರ ಮನರಂಜನೆಗಾಗಿ ಕ್ಲಬ್‌ ನಿರ್ಮಾಣ ಮಾಡಲು ಸಿಐಡಿ ಕೇಂದ್ರ ಕಚೇರಿ ಇರುವ ಬೆಂಗಳೂರಿನ ಕಾರ್ಲ್‌ಟನ್‌ ಹೌಸ್‌ ಅನ್ನೇ ಆಯ್ದುಕೊಂಡಿರುವುದು ಎಷ್ಟು ಸರಿ? ಓಡಾಡಲು ಮತ್ತು ತಲುಪಲು ಸಕಲ ಸೌಲಭ್ಯಗಳ ಆಗರವೇ ಶಾಸಕರ ಬಳಿ ಇರುವಾಗ, ಹಲವು ದಶಕಗಳಿಂದ ಸುಸಜ್ಜಿತ ವ್ಯವಸ್ಥೆಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಿಐಡಿ ಕಚೇರಿಯನ್ನು ಸ್ಥಳಾಂತರ ಮಾಡುವುದು ಸರಿಯಲ್ಲ.

ಬಿಬಿಎಂಪಿ ಇತ್ತೀಚೆಗೆ ನಗರ ಪ್ರದೇಶದಲ್ಲಿ ನೂರಾರು ಎಕರೆ ಒತ್ತುವರಿ ಜಾಗವನ್ನು ತೆರವುಗೊಳಿಸಿ ವಶಪಡಿಸಿಕೊಂಡಿದೆ. ಅದರಲ್ಲಿ ತಮಗೆ ಬೇಕಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು ತಮ್ಮ ಇಚ್ಛಾನುಸಾರ ಶಾಸಕರು ಕ್ಲಬ್‌ ನಿರ್ಮಿಸಿಕೊಳ್ಳಬಹುದು. ಜನಪ್ರತಿನಿಧಿಗಳು ಇಂತಹ ವಿಚಾರದಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಸ್ಥಳಾಂತರ ಮತ್ತು ಮಾರ್ಪಾಡಿನ ಅನಗತ್ಯ ವೆಚ್ಚವನ್ನು ಸಹ ಉಳಿಸುವಂತೆ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT