ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ: ಅರಿವು ಮೂಡಲಿ

Last Updated 12 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಸ್ವಚ್ಛತೆ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡದ ಹೊರತು ಸ್ವಚ್ಛ ಭಾರತದ ಕಲ್ಪನೆ ನನಸಾಗುವುದು ಸಾಧ್ಯವಿಲ್ಲ. ಬೀಡಾ ಜಗಿದು ಕಂಡಕಂಡಲ್ಲಿ ಉಗುಳುವ ಮಂದಿಗೆ ‘ವಂದೇಮಾತರಂ’ ಹಾಡುವ ಹಕ್ಕು ಇದೆಯೇ ಎಂದು ಪ್ರಧಾನಿ ನರೇಂದ್ರ ಮೋದಿ ಕೇಳಿರುವುದರಲ್ಲಿ ಅರ್ಥ ಇದೆ.

ಹಾದಿ–ಬೀದಿಗಳಲ್ಲಿ ಕಸ ಎಸೆಯುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದೇ ಬಹುತೇಕರು ಭಾವಿಸಿದಂತಿದೆ. ಸಿಪ್ಪೆ, ಸದೆ, ಪ್ಲಾಸ್ಟಿಕ್‌ ಕವರ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ರೂಢಿಸಿಕೊಂಡಿದ್ದೇವೆ. ಅದನ್ನು ಗುಡಿಸುವ ಹೊಣೆಗಾರಿಕೆ ನಮ್ಮದಲ್ಲ. ಅದೇನಿದ್ದರೂ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಎಂದು ಭಾವಿಸಿದ್ದೇವೆ.

ಈ ಮನಸ್ಥಿತಿ ಮೊದಲು ಬದಲಾಗಬೇಕು. ಸುತ್ತಮುತ್ತಲ ಪರಿಸರವನ್ನಾದರೂ ಸ್ವಚ್ಛವಾಗಿ ಇರಿಸಿಕೊಳ್ಳಬೇಕು ಎಂಬ ಅರಿವು ಪ್ರತಿಯೊಬ್ಬರಲ್ಲೂ ಮೂಡಿದಾಗ ಮಾತ್ರ ಸ್ವಚ್ಛ ಪರಿಸರವನ್ನು ಕಾಣಲು ಸಾಧ್ಯ.

ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆಯಬೇಕು. ಜತೆಗೆ ದಂಡನೆಯ ಕ್ರಮಗಳನ್ನೂ ಜರುಗಿಸಬೇಕು.

–ಸೌಜನ್ಯಾ ಕೆ.ಎಸ್‌., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT