ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಪೋಲು ಸಲ್ಲ

Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘ಅನುರಣನ’ ಅಂಕಣದ ‘ಕಟ್ಟಡವೇ ಸತ್ಯ, ಕಟ್ಟಡವೇ ನಿತ್ಯ’ (ಪ್ರ.ವಾ., ಅ.24) ಬರಹದಲ್ಲಿ ಲೇಖಕ ನಾರಾಯಣ ಎ. ಅವರು ವ್ಯಕ್ತಪಡಿಸಿದ ಅಭಿಪ್ರಾಯ ಅಪ್ಪಟ ಸತ್ಯ.

ಆಡಳಿತಗಾರರು ತಮ್ಮನ್ನು ತಾವೇ ವಿಮರ್ಶೆಗೆ ಒಳಪಡಿಸಿಕೊಂಡು ಖಜಾನೆಯ ಧನ–ದ್ರವ್ಯಗಳನ್ನು ಅಪವ್ಯಯ ಮಾಡಿ ಅಪಹಾಸ್ಯಕ್ಕೆ ಗುರಿಯಾಗುವುದನ್ನು ಬಿಟ್ಟು, ಅದೇ ಧನವನ್ನು ಸತ್ಕಾರ್ಯಗಳಿಗೆ ವಿನಿಯೋಗಿಸುವುದು ಅತ್ಯುತ್ತಮ. ಪುರಾಣ, ಐತಿಹಾಸಿಕ ವ್ಯಕ್ತಿ, ಕಟ್ಟಡಗಳ ನೆಪದಲ್ಲಿ ಜಯಂತಿ, ಉತ್ಸವಗಳಿಗೆ ಖಜಾನೆಯ ಹಣವನ್ನು ಪೋಲು ಮಾಡುವುದು ಸಲ್ಲ. ಈ ಆಡಳಿತಗಾರರ ಧೋರಣೆ, ಉತ್ಸಾಹ, ವಿಜೃಂಭಣೆಗಳನ್ನು ನೋಡಿದರೆ ಪುರಾಣ ಮತ್ತು ಐತಿಹಾಸಿಕ ರಾಜರುಗಳ, ವಂದಿಮಾಗಧರ ಮನಸ್ಥಿತಿ ನೆನಪಾಗುತ್ತದೆ. ಈ ಕಳಕಳಿ ಎಲ್ಲ ಪಕ್ಷಗಳ ಧೋರಣೆಗಳಿಗೂ ಅನ್ವಯ.

–ಬಿ. ರಮೇಶ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT