ಈಗ ಕೇಂದ್ರ ಸರ್ಕಾರದಲ್ಲಿ ಸಚಿವೆಯಾಗಿರುವ ಮೇನಕ ಗಾಂಧಿಯವರ ಹೆಸರನ್ನು ಸಾರ್ವಜನಿಕ ವಲಯದಲ್ಲಿ ಕೆಲವೆಡೆ ‘ಮನೇಕಾ’ ಎಂದು ಬಿಂಬಿಸುತ್ತಿರುವುದು ಸರಿ ಅಲ್ಲ. ಅವರ ಹೆಸರಿನ ಸರಿಯಾದ ಉಚ್ಚಾರ ‘ಮೇನಕಾ’ ಅವರು ಲೋಕಸಭಾ ಸದಸ್ಯರಾಗಿ ಪ್ರತಿಜ್ಞಾ ವಚನ ಸ್ವೀಕರಿಸಿದಾಗ ತಮ್ಮ ಹೆಸರನ್ನು ‘ಮೇನಕಾ ಗಾಂಧಿ’ ಎಂದೇ ಸ್ಪಷ್ಟವಾಗಿ ಹೇಳಿಕೊಂಡದ್ದನ್ನು ನಾನು ದೃಶ್ಯಮಾಧ್ಯಮದಲ್ಲಿ ಪ್ರತ್ಯಕ್ಷವಾಗಿ ಕಂಡೆ; ಕೇಳಿದೆ.

‘ಮೂರ್ತಿ’, ‘ಅಯ್ಯ’ ಎಂಬ ಹೆಸರುಗಳ ಅಂತ್ಯ ಭಾಗಗಳನ್ನು ಇಂಗ್ಲಿಷ್ ಲಿಪಿಯಲ್ಲಿ ಬೇರೆ ಬೇರೆ ರೀತಿಯಲ್ಲಿ ಬರೆದರೂ (ಉದಾ: ‘moorthy’, ‘murthy’, ‘aiya’, ‘ayya’) ಅವುಗಳನ್ನು ಹಾಗೇ ಉಚ್ಚರಿಸುತ್ತಾರೆ. ಇಂಗ್ಲಿಷಿನಲ್ಲಿ ‘maneka’ ಎಂದು ಅವರು ಬರೆದುಕೊಳ್ಳುವುದರಿಂದ ಅದನ್ನು ‘ಮನೇಕಾ’ ಎಂದು ಕನ್ನಡದಲ್ಲಿ ಬರೆಯುತ್ತಾರೆ. ಅದು ಸರಿಯಲ್ಲ. ಅವರ ಹೆಸರನ್ನು ಕನ್ನಡದಲ್ಲಿ ‘ಮೇನಕಾ’ ಎಂದು ಬಿಂಬಿಸುವುದೇ ಸರಿಯಾದುದು. ಭಾರತೀಯ ಭಾಷೆಗಳಲ್ಲಿ ಲಿಪಿಗೂ ಉಚ್ಚಾರಕ್ಕೂ ಸಂಪೂರ್ಣ ಸಾಮ್ಯವಿದೆ–ಇಂಗ್ಲಿಷಿನಲ್ಲಿ ಹಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.