7

‘ಚಾಳಿಗೆ ಅಡಿಕ್ಟ್‌ ಆಗಿಬಿಟ್ಟಿದ್ದೇವೆ!’

Published:
Updated:

ಶಿರಸಿ: ನಗರದ ಲೆಕ್ಕ ಪರಿಶೋಧಕರೆಲ್ಲ ಸೇರಿ ‘ಜ್ಞಾನ ಸ್ಟಡಿ ಸರ್ಕಲ್’ ಎಂಬ ಸಂಘಟನೆಯೊಂದನ್ನು ಕಟ್ಟಿಕೊಂಡು ತಿಂಗಳಿಗೊಂದು ಉಪನ್ಯಾಸ ಕಾರ್ಯಕ್ರಮ ನಡೆಸುತ್ತಾರೆ. ಈ ತಿಂಗಳ ‘ಆದಾಯ ತೆರಿಗೆ ಕಾಯ್ದೆ’ ಉಪನ್ಯಾಸ ಕಾರ್ಯಕ್ರಮದ ಉದ್ಘಾಟಕರಾಗಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಬಂದಿದ್ದರು.

ಕೇಂದ್ರ ಸರ್ಕಾರ ತೆರಿಗೆ ಪದ್ಧತಿಯಲ್ಲಿ ತಂದಿರುವ ಬಿಗಿ ಕ್ರಮದ ಕುರಿತು ಅವರು ಭರ್ಜರಿ ಭಾಷಣ ಮಾಡಿದರು. ಈ ಸರ್ಕಾರ ಬರದಿದ್ದರೆ, ವಿದೇಶಿ ದೇಣಿಗೆಯನ್ನು ಪಡೆಯುವ ಸ್ವಯಂಸೇವಾ ಸಂಸ್ಥೆಗಳು ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಆ ಹಣವನ್ನು ಬಳಸುವುದನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನೆಲ್ಲ ಸವಿಸ್ತಾರವಾಗಿ ವಿವರಿಸುತ್ತಿದ್ದಾಗ ಇಡೀ ಸಭೆ, ಸೂಜಿ ಬಿದ್ದರೂ ಸಪ್ಪಳವಾಗುಷ್ಟು ಶಾಂತವಾಗಿ ಕೇಳುತ್ತಿತ್ತು. ಸುಮಾರು 18 ನಿಮಿಷ ಮಾತನಾಡಿದ ಹೆಗಡೆ ಅವರು, ಇದ್ದಕ್ಕಿದ್ದ ಹಾಗೆ ವಿಷಯ ಬದಲಿಸಿದರು. ‘ನಮಗೆ ಇತ್ತೀಚೆಗೆ ಒಂದು ಚಾಳಿ ಶುರುವಾಗಿದೆ.

‘ಲೇಟಾಗಿ ಬಂದು ಬೇಗ ಹೋಗುವ ಚಾಳಿ’ ಅದು. ಅದಕ್ಕೆ ನಾವು ಅಡಿಕ್ಟ್‌ ಆಗಿಬಿಟ್ಟಿದ್ದೇವೆ. ಈಗ ನಾನು ಬೇರೊಂದು ಕಾರ್ಯಕ್ರಮಕ್ಕೆ ಹೋಗಬೇಕಾಗಿದೆ’ ಎನ್ನುತ್ತಲೇ ಸರಸರನೆ ವೇದಿಕೆಯಿಂದ ಇಳಿದಾಗ, ವಿಷಯದೊಳಗೆ ಮುಳುಗಿದ್ದ ಸಭಿಕರು ಕಕ್ಕಾಬಿಕ್ಕಿಯಾದರು!

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !