‘ಪುರುಷರಿಗೆ ನಾನೇ ಹಾರ ಹಾಕುತ್ತಿರುವೆ’

7

‘ಪುರುಷರಿಗೆ ನಾನೇ ಹಾರ ಹಾಕುತ್ತಿರುವೆ’

Published:
Updated:

ಹೊಸಪೇಟೆ: ‘ನಮ್ಮ ಸಮಾಜದಲ್ಲಿ ಈಗಲೂ ಲಿಂಗತಾರತಮ್ಯವಿದೆ. ಅದು ಕೊನೆಗಾಣಬೇಕು. ಈ ಕಾರಣಕ್ಕಾಗಿಯೇ ಮೂರು ವರ್ಷಗಳಿಂದ ಕಾರ್ಯಕ್ರಮಕ್ಕೆ ಬಂದ ಎಲ್ಲ ಪುರುಷ ಅತಿಥಿಗಳಿಗೆ ನಾನೇ ಹಾರ ಹಾಕುತ್ತಿರುವೆ’

ಇದು ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಅವರ ಮಾತು. ಇತ್ತೀಚೆಗೆ ವಿ.ವಿ.ಯಲ್ಲಿ ಆಯೋಜಿಸಿದ್ದ ಸಮಾಜಶಾಸ್ತ್ರ ಸಮ್ಮೇಳನದಲ್ಲಿ ಮಾತನಾಡಿ, ‘ಕಾರ್ಯಕ್ರಮಕ್ಕೆ ಬಂದಿರುವ ಪುರುಷ ಅತಿಥಿಗಳಿಗೆ ಹಾರ ಹಾಕಲು ಹೋದಾಗ ಕೆಲವರು ಹಿಂದೇಟುಹಾಕಿದ್ದಾರೆ. ಆದರೆ, ನಾನು ಹಟ ಹಿಡಿದು ಹಾರ ಹಾಕಿದ್ದೇನೆ. ಈ ಸ್ಥಾನದಲ್ಲಿ ಮುಂದುವರಿಯುವವರೆಗೆ ಹಾಗೆಯೇ ಮಾಡುತ್ತೇನೆ’ ಎಂದಾಗ ಇಡೀ ಸಭೆ ನಗೆಗಡಲಲ್ಲಿ ತೇಲಿತು.

‘ಬರೀ ಬಾಯಿ ಮಾತಿನಿಂದ ಲಿಂಗ ತಾರತಮ್ಯ ಹೋಗುವುದಿಲ್ಲ. ಅದು ಕೃತಿ ಮೂಲಕ ಆಗಬೇಕು. ನಾನು ಹೇಳುತ್ತಿರುವ ವಿಷಯ ಕೆಲವರಿಗೆ ತಮಾಷೆಯಾಗಿ ಅನಿಸಬಹುದು. ಆದರೆ, ಇದು ತಮಾಷೆಯಲ್ಲ’ ಎಂದು ಸ್ಪಷ್ಟಪಡಿಸಿದರು.

 

ಬರಹ ಇಷ್ಟವಾಯಿತೆ?

 • 12

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !