ಮೂರು ದಿನಕ್ಕೆ ₹ 240 ಕೋಟಿ ವಹಿವಾಟು

7
ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳ ಸಮಾರೋಪ

ಮೂರು ದಿನಕ್ಕೆ ₹ 240 ಕೋಟಿ ವಹಿವಾಟು

Published:
Updated:
Prajavani

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳಕ್ಕೆ 2 ಲಕ್ಷ ಜನ ಭೇಟಿ ನೀಡಿದ್ದು, ₹ 240 ಕೋಟಿಗೂ ಅಧಿಕ ವಹಿವಾಟು ಆಗಿದೆ.

ಈ ಕುರಿತು ಭಾನುವಾರ ನಡೆದ ಮೇಳದ ಸಮಾರೋಪ ಸಮಾರಂಭದಲ್ಲಿ ಕೃಷಿ ಇಲಾಖೆ ಆಯುಕ್ತ ಕೆ.ಜಿ.ಜಗದೀಶ್‌ ಮಾಹಿತಿ ನೀಡಿದರು. ‘ಕಳೆದ ಬಾರಿಯ ಮೇಳದಲ್ಲಿ ₹ 157 ಕೋಟಿ ವಹಿವಾಟು ಆಗಿತ್ತು’ ಎಂದರು.

‘ಈಗಾಗಲೇ ಸಿರಿಧಾನ್ಯ ಬೆಳೆಯುವ 2000 ರೈತರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ನಡೆದಿರುವ ಸಂವಾದಗಳಲ್ಲಿ ಪಾಲ್ಗೊಂಡು ಸಿರಿಧಾನ್ಯ ಮಾರುಕಟ್ಟೆ ವ್ಯವಸ್ಥೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ರೈತರಿಗಾಗಿ 300 ಬಿ–ಟು–ಬಿ ಸಭೆಗಳು ನಡೆದಿವೆ’ ಎಂದು ಹೇಳಿದರು.

ಕೃಷಿ ಸಚಿವ ಎಚ್‌.ಎನ್‌.ಶಿವಶಂಕರ್‌ರೆಡ್ಡಿ, ‘ತೀವ್ರ ಬರಗಾಲದಿಂದ ರೈತರು ಹತಾಶರಾಗಿದ್ದಾರೆ. ಕಡಿಮೆ ನೀರು ಬಳಸುವ ನೂತನ ಕೃಷಿ ತಂತ್ರಗಳನ್ನು ಬಳಸಿಕೊಳ್ಳಲು ಈಗಾಗಲೇ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಸಿರಿಧಾನ್ಯ ಬೆಳೆಗಳು ಸಹ ಕಡಿಮೆ ನೀರಿನ ಬೆಳೆಗಳಾಗಿವೆ. ಈ ಬೆಳೆಗಳನ್ನು ಬೆಳೆಯಲು ರೈತರನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ’ ಎಂದು ಹೇಳಿದರು.

‘ದೇಶ–ವಿದೇಶಗಳಲ್ಲಿ ಸಿರಿಧಾನ್ಯ ಉತ್ಪನ್ನಗಳಿಗೆ ಬಾರಿ ಬೇಡಿಕೆ ಬರುತ್ತಿದೆ. ಇದರಿಂದ ಸಿರಿಧಾನ್ಯ ಬೆಳೆದ ರೈತರಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಖರೀದಿದಾರರ ನಡುವೆ ನೇರ ಸಂಪರ್ಕ ಕಲ್ಪಿಸುತ್ತೇವೆ. ಉತ್ತಮ ಮಾರುಕಟ್ಟೆ, ಉತ್ಪನ್ನಗಳಿಗೆ ಬೆಂಬಲ ಬೆಲೆ ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ಸಿರಿ’ ಪ್ರಶಸ್ತಿ ವಿಜೇತರು

ಸೆಂಟ್ರಲ್ ಫುಡ್ ಟೆಕ್ನಾಲಜಿ ರಿಸರ್ಚ್ ಇನ್‍ಸ್ಟಿಟ್ಯೂಟ್ (ಆರ್‌ಎನ್‍ಡಿ ಎಕ್ಸ್‌ಲೆನ್ಸ್ ಅವಾರ್ಡ್), ಸಿ.ತಾರಾ ಸತ್ಯವತಿ (ಮೊದಲ ಔಟ್‌ಸ್ಟ್ಯಾಂಡಿಂಗ್‌ ಅವಾರ್ಡ್), ಅರುಣಾ (ದ್ವಿತೀಯ ಔಟ್‌ಸ್ಟ್ಯಾಂಡಿಂಗ್‌ ಅವಾರ್ಡ್), ಕೊಠಾರಂ ಆಗ್ರೋ ಪ್ರೈ ಲಿ. (ಸ್ಟಾರ್ಟ್ ಅಪ್ ಅವಾರ್ಡ್), ಶೈಲಜಾ (ಅರ್ಲಿ ಫುಡ್ ಅವಾರ್ಡ್), ಇನ್ನರ್ ಬಿನ್ ವಿಲ್‍ನರ್ ಪ್ರೈ ಲಿ., ದಾನ್ ಫೌಂಡೇಶನ್ (ಎನ್‍ಜಿಓ ಅವಾರ್ಡ್) ನೀಡಲಾಗಿದೆ. ಪ್ರಶಸ್ತಿಯು ತಲಾ ₹ 30 ಸಾವಿರ ನಗದು ಬಹುಮಾನ, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ಒಳಗೊಂಡಿದೆ.

‘ಅಡುಗೆ ಸ್ಪರ್ಧೆ’ಯ ವಿಜೇತರು

ಮೇಳದಲ್ಲಿ ಎರಡು ವಿಭಾಗವಾಗಿ ಅಡುಗೆ ಮಾಡುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮೊದಲ ವಿಭಾಗದಲ್ಲಿ ಮಾನಸ (ಪ್ರಥಮ ₹ 10 ಸಾವಿರ), ದಿವ್ಯಾ ಜೈನ್ (ದ್ವಿತೀಯ ₹ 8 ಸಾವಿರ), ರೂಪಾ ಬಾಲಚಂದ್ರ (ತೃತೀಯ ₹ 6 ಸಾವಿರ). ಎರಡನೇ ವಿಭಾಗದಲ್ಲಿ ಶಿಫಾ ಫಾತಿಮಾ (ಪ್ರಥಮ, ₹10 ಸಾವಿರ), ಮಾನಸ (ದ್ವಿತೀಯ ₹8 ಸಾವಿರ), ದಿವ್ಯಾ ಜೈನ್ (ತೃತೀಯ ₹6 ಸಾವಿರ) ಬಹುಮಾನ ಪಡೆದರು.

‘ಅತ್ಯುತ್ತಮ ಪ್ರದರ್ಶನದ ಮಳಿಗೆ’ ಪ್ರಶಸ್ತಿ

ಫಲಾಟ ಆಗ್ರೊ, ವಂದೇ ಮಾತರಂ ಮಳಿಗೆ, ಗ್ರಾಮೀಣ ಅಂಗಡಿ, ಎಂಆರ್‌ಟಿ, ಗ್ರಾಮೀಣ ಕುಟುಂಬ, ಸಹಜ ಸಮೃದ್ಧಿ ಆರ್ಗ್ಯಾನಿಕ್‌, ಸ್ಪಾಟ್‌ ಲೈಪ್‌ ಪ್ರೈ. ಲಿ. ಸಂಸ್ಥೆಯ ಮಳಿಗೆಗಳು ಅತ್ಯುತ್ತಮ ಪ್ರದರ್ಶನ ಮಳಿಗೆಗಳಾಗಿ ಪ್ರಶಸ್ತಿಯನ್ನು ಪಡೆದುಕೊಂಡವು.

***

ಅಂಕಿ ಅಂಶ

1 ಲಕ್ಷ ಹೆಕ್ಟೇರ್

ಸಿರಿಧಾನ್ಯ ಬೆಳೆ ಬೆಳೆಯುತ್ತಿರುವ ಪ್ರದೇಶ

2.82 ಲಕ್ಷ ಟನ್

ಉತ್ಪಾದನೆ ಆಗುತ್ತಿರುವ ಸಿರಿಧಾನ್ಯ ಬೆಳೆ

67.43 ಲಕ್ಷ ಟನ್

ರಫ್ತು ಆಗಿರುವ ಸಿರಿಧಾನ್ಯ ಬೆಳೆ

 67

ಪರಸ್ಪರ ಮಾಡಿಕೊಳ್ಳಲಾದ ಒಪ್ಪಂದಗ

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !